ಮಂಗಳೂರು: ಜೆಡಿಎಸ್ ಅಭ್ಯರ್ಥಿ ಸುಮತಿ ಎಸ್ ಹೆಗ್ಡೆಯವರಿಂದ ಬಂದರ್ ಪ್ರದೇಶದಲ್ಲಿ ಅಬ್ಬರದ ಪ್ರಚಾರ; ಸಾರ್ವಜನಿಕರಿಂದ ಉತ್ತಮ ಸ್ಪಂದನೆ

Prasthutha|

ಮಂಗಳೂರು: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ಜನತಾದಳ (ಜಾ) ಅಭ್ಯರ್ಥಿ ಸುಮತಿ ಹೆಗ್ಡೆಯವರು ಇಂದು ನಗರದ ಬಂದರ್ ವಾರ್ಡ್ ರಸ್ತೆಯುದ್ದಕ್ಕೂ ರೋಡ್ ಶೋ ಮೂಲಕ ಅಬ್ಬರದ ಪ್ರಚಾರ ನಡೆಸಿದರು.

- Advertisement -

    ಈ ಪ್ರಚಾರದ ನೇತೃತ್ವವನ್ನು ಜೆಡಿಎಸ್ ದ.ಕ.‌ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ  ರಮೀಝಾ ನಾಸಿರ್ ವಹಿಸಿದರು.  ದ.ಕ.‌ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ  ವಸಂತ್ ಪೂಜಾರಿ , ಜೆಡಿಎಸ್ ದ.ಕ. ಜಿಲ್ಲಾ ಕಾರ್ಯಾಧ್ಯಕ್ಷ ಇಕ್ಬಾಲ್ ಅಹಮದ್ ಮೂಲ್ಕಿ,  ರಾಜ್ಯ ಜೆಡಿಎಸ್ ಮೀನುಗಾರಿಕಾ ಅಧ್ಯಕ್ಷ ರತ್ನಾಕರ ಸುವರ್ಣ, ರಾಜ್ಯ ಯುವ ಮುಖಂಡ ಶ್ರೀನಾಥ್ ರೈ, ಜಿಲ್ಲಾ  ಕಾರ್ಯದರ್ಶಿ ರಾಮ್ ಗಣೇಶ್, ರಾಜ್ಯ ಸಂಘಟನಾ ಕಾರ್ಯದರ್ಶಿ ಝಮೀರ್ ಶಾ, ನಾಸಿರ್ ಬಂದರ್,  ಮಂಗಳೂರು ನಗರ ದಕ್ಷಿಣ ಪದಾಧಿಕಾರಿಗಳಾದ ಇಝಾ ಬಜಾಲ್, ಅಲ್ತಾಫ್ ತುಂಬೆ, ಕವಿತಾ, ಶಾರದಾ ಶೆಟ್ಟಿ ಹಾಗೂ ಹಲವಾರು ಕಾರ್ಯಕರ್ತರು, ಹಿತೈಷಿಗಳು ಉಪಸ್ಥಿತರಿದ್ದರು.

 ಯುವ ಮುಖಂಡ ಸಿರಾಜ್ ಬಂದರ್ ಇವರನ್ನು ಜೆಡಿಎಸ್ ಬಂದರ್ ವಲಯಾಧ್ಯಕ್ಷರನ್ನಾಗಿ ನೇಮಕಗೊಳಿಸಲಾಯಿತು.