ಲಾಯಿಲ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಪ್ರದೇಶಗಳಲ್ಲಿ ಎಸ್‌ಡಿಪಿಐ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ಬಿರುಸಿನ ಮತಯಾಚನೆ

Prasthutha|

- Advertisement -

ಬೆಳ್ತಂಗಡಿ: ಬೆಳ್ತಂಗಡಿ ಕ್ಷೇತ್ರ ಲಾಯಿಲ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಮಂಜೊಟ್ಟಿ, ನಡ, ನಾವೂರು, ಕಿಲ್ಲೂರು, ಬೆದ್ರಬೆಟ್ಟು, ಬಂಗಾಡಿ, ಕಾಜೂರು ಪರಿಸರದಲ್ಲಿ ಬೆಳ್ತಂಗಡಿ ಕ್ಷೇತ್ರದ ಎಸ್‌ಡಿಪಿಐ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ಅವರು ಮನೆ ಮನೆಗೆ ಭೇಟಿ ನೀಡಿ ಮತ ಯಾಚಿಸಿದರು.

ನಂತರ ಇತಿಹಾಸ ಪ್ರಸಿದ್ಧ ಕಾಜೂರು ಹಝ್ರತ್ ಹಯಾತುಲ್ ಅವುಲಿಯಾ ದರ್ಗಾ ಶರೀಫ್ ಗೆ ಭೇಟಿ ನೀಡಿ ಮಸೀದಿ ಗುರುಗಳ ದುವಾ ಆಶಿರ್ವಾದ ಪಡೆದರು.

- Advertisement -

ಈ ಸಂದರ್ಭದಲ್ಲಿ ಎಸ್‌ಡಿಪಿಐ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ನವಾಝ್ ಕಟ್ಟೆ, ಕಾರ್ಯದರ್ಶಿ ನಿಜಾಮ್ ಗೇರುಕಟ್ಟೆ, ಜೊತೆ ಕಾರ್ಯದರ್ಶಿ ಸಾದಿಕ್ ಲಾಯಿಲ, ಮಿತ್ತಬಾಗಿಲು ಪಂಚಾಯತ್ ಸದಸ್ಯ ಅಹ್ಮದ್ ಕಬೀರ್ ಕಾಜೂರು, ಖಾದರ್ ನಾವೂರು, ಸಲೀಂ ಮುರ, ಸಮೀರ್ ಬೆದ್ರಬೆಟ್ಟು, ಸಾದಿಕ್ ನಾವೂರು, ಅಶ್ರಫ್ ಕಾಜೂರು  ಮತ್ತು ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.