ಜಾರಕಿಹೊಳಿ ‘ಸಿಡಿ ಲೇಡಿ’ ಮತ್ತೆ ಪ್ರತ್ಯಕ್ಷ । ಮತ್ತೊಂದು ವೀಡಿಯೋ ಹೇಳಿಕೆ ಬಿಡುಗಡೆ

Prasthutha|

► ವೀಡಿಯೋದಲ್ಲಿ ಸಿದ್ದರಾಮಯ್ಯ, ಡಿಕೆಶಿ ಹೆಸರು ಪ್ರಸ್ತಾಪ !

- Advertisement -

ರಮೇಶ್ ಜಾರಕಿಹೊಳಿ ಜೊತೆಗೆ ಸಿಡಿಯಲ್ಲಿ ಕಾಣಿಸಿಕೊಂಡಿದ್ದಾಳೆ ಎನ್ನಲಾದ ಸಿಡಿ ಲೇಡಿ ಮತ್ತೊಮ್ಮೆ ವೀಡಿಯೋ ಒಂದನ್ನು ಮಾಡಿ ಬಿಡುಗಡೆಗೊಳಿಸಿದ್ದಾಳೆ. ಆ ವೀಡಿಯೋದಲ್ಲಿ ನನ್ನ ಅಪ್ಪ – ಅಪ್ಪನ ಸುರಕ್ಷತೆ ನನಗೆ ಮುಖ್ಯ. ಅವರು ಯಾವಾಗ ಸುರಕ್ಷಿತರಾಗಿದ್ದಾರೆ ಎಂದು ನನಗೆ ಅನಿಸುತ್ತದೋ ಆವಾಗ ನಾನು ಎಸ್ ಐ ಟಿ ಮುಂದೆ ಬರುತ್ತೇನೆ. ಆ ಬಳಿಕ ಯಾವ ರೀತಿಯಲ್ಲಿ ಹೇಳಿಕೆ ನೀಡಬೇಕು ಮತ್ತು ದೂರು ಸಲ್ಲಿಸಬೇಕು ಎಂದು ತೀರ್ಮಾನಿಸುತ್ತೇನೆ ಎಂದು ವೀಡಿಯೋದಲ್ಲಿ ಹೇಳೀದ್ದಾಳೆ.

ಹೊಸ ವೀಡಿಯೋದಲ್ಲಿ  ಸಿದ್ಧಾರಾಮಯ್ಯ , ಡಿಕೆ ಶಿವಕುಮಾರ್ ಮತ್ತು ರಮೇಶ್ ಜಾರಕಿಹೊಳಿ ಹೆಸರು ಪ್ರಸ್ತಾಪ ಮಾಡಿದ್ದಾಳೆ ಮತ್ತು ಅವರೊಂದಿಗೆ ನನ್ನ ಪೋಷಕರಿಗೆ ರಕ್ಷಣೆ ಕೊಡುವಂತೆ ಕೇಳಿಕೊಂಡಿದ್ದಾಳೆ. ನನ್ನ ಅಪ್ಪ ಅಮ್ಮ ನಾನು ಅಪಹರಣವಾಗಿದ್ದೇ ನೆ ಎಂದು ದೂರು ಕೊಟ್ಟಿದ್ದಾರೆ. ಅವರು ಸ್ವ ಇಚ್ಚೆಯಿಂದ ಬಂದು ದೂರು ನೀಡಿದ್ದಾರೆಂದು ನನಗೆ ಅನಿಸುತ್ತಿಲ್ಲ. ಯಾಕೆಂದರೆ ಅವರಿಗೆ ನಾನು ತಪ್ಪು ಮಾಡಿಲ್ಲ ಎಂದು ಬಲವಾದ ನಂಬಿಕೆ ಇದೆ ಎಂದು ಹೇಳಿದ್ದಾಳೆ. ಇಷ್ಟು ಮಾತ್ರವಲ್ಲ, ಮಾರ್ಚ್ 12 ರಂದು ನಾನೊಂದು ವೀಡಿಯೋ ಹೇಳಿಕೆ ಕಮಿಷನರ್ ಅವರಿಗೆ ಕಳಿಸಿದ್ದೆ. ಆದರೆ ಅವರು ಅದನ್ನು ಮರುದಿನ ಅಂದರೆ ಮಾರ್ಚ್ 13 ರಂದು ಬಿಡುಗಡೆಗೊಳಿಸಿದ್ದಾರೆ. ಅದೂ ರಮೇಶ್ ಜಾರಕಿಹೊಳಿ ಅವರು ತರಾತುರಿಯಲ್ಲಿದೂರು ಕೊಟ್ಟ ಅರ್ಧ ಗಂಟೆಯ ನಂತರ ಬಿಡುಗಡೆಗೊಳಿಸಿದ್ದಾರೆ. ಹೀಗಾಗಿ ಎಸ್ ಐ ಟಿಯವರು ಯಾರ ಪರವಿದ್ದಾರೆ ಎಂದು ತಿಳಿಯುತ್ತಿಲ್ಲ ಎಂದು ಹೇಳಿದ್ದಾಳೆ.

Join Whatsapp