ಕೊಪ್ಪಳ: ರಾಜ್ಯದ್ಯಾಂತ ಇಂದು ತೆರೆಕಂಡಿರುವ ದಿವಂಗತ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರದ ಟಿಕೆಟ್ ಗಾಗಿ ಅಪ್ಪು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ನಗರದ ಗಂಗಾವತಿಯ ಶಿವ ಚಿತ್ರಮಂದಿರದಲ್ಲಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಥಿಯೇಟರ್ ಗೆ ಕಲ್ಲು ತೂರಾಟ ನಡೆಸಿ ಕಿಟಕಿಗಳನ್ನು ಪುಡಿಗೈದಿದ್ದಾರೆ.
ಚಿತ್ರ ಮಂದಿರದ ಹಲವಾರು ಅಭಿಮಾನಿಗಳು ಜಮಾವಣೆಗೊಂಡಿದ್ದು, ಈ ಮಧ್ಯೆ ಟಿಕೆಟ್ಗಾಗಿ ಮುಗಿಬಿದಿದ್ದಾರೆ. ಟಿಕೆಟ್ಗಾಗಿ ರಾತ್ರಿಯೆಲ್ಲ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಚಿತ್ರದ ಟಿಕೆಟ್ ಸಿಗದಿದ್ದಾಗ ಆಕ್ರೋಶಗೊಂಡಿದ್ದಾರೆ ಎನ್ನಲಾಗಿದ್ದು, ಥಿಯೇಟರ್ ಶಟರ್, ಚಿತ್ರಮಂದಿರದ ಹಿಂಬಾಗ ಕಿಟಕಿಗಳನ್ನು ಪುಡಿ ಮಾಡಿದ್ದಾರೆ.
ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಬಳ್ಳಾರಿಯಲ್ಲಿ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.