ಏಷ್ಯಾದ ಹಲವು ರಾಷ್ಟ್ರಗಳಲ್ಲಿ ಮಿತಿಮೀರುತ್ತಿರುವ ಕೋವಿಡ್; ಭಾರತಕ್ಕೆ ಎಚ್ಚರಿಕೆಯ ಕರೆಗಂಟೆ

Prasthutha|

ಹೊಸದಿಲ್ಲಿ: ಭಾರತದಲ್ಲಿ ಕೋವಿಡ್ 19  ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಚೀನಾ, ಹಾಂಗ್ಕಾಂಗ್, ಸಿಂಗಾಪುರ, ದಕ್ಷಿಣ ಕೊರಿಯಾ, ಯುಕೆ ಮುಂತಾದ ದೇಶಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಮಿತಿಮೀರುತ್ತಿದೆ.

- Advertisement -

ಈ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿ, ಕೊವಿಡ್ 19 ಸ್ಥಿತಿಗತಿ, ಲಸಿಕೆ ಅಭಿಯಾನದ ವೇಗ ಇತ್ಯಾದಿಗಳ ಪರಿಶೀಲನೆ ಮಾಡಿದ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ‘ಭಾರತದಲ್ಲಿಜನರು ಎಚ್ಚರಿಕೆಯಿಂದ ಇರಬೇಕು. ಜಿನೋಮ್ ಸಿಕ್ವೆನ್ಸಿಂಗ್, ಕೊರೋನಾ ತಪಾಸಣೆ, ಕೊರೋನಾ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತೀವ್ರ ನಿಗಾ ಇಡಬೇಕು ಎಂದು ತಿಳಿಸಿದ್ದಾರೆ.

ಏಷ್ಯಾದ ಹಲವು ರಾಷ್ಟ್ರಗಳಲ್ಲಿ ಕೋವಿಡ್ ಪ್ರಮಾಣ ಹೆಚ್ಚುತ್ತಿದ್ದು , ಭಾರತದಲ್ಲೂ ಪುನಃ ಕಟ್ಟೆಚ್ಚರ ವಹಿಸುವಂತೆ  ಘೋಷಿಸಲಾಗಿದೆ.

- Advertisement -

ಕೋವಿಡ್ ನಿಂದಾಗಿ  ಕಳೆದ ಎರಡು ವರ್ಷಗಳಿಂದ ರದ್ದುಗೊಂಡಿದ್ದ  ಅಂತಾರಾಷ್ಟ್ರೀಯ ವಿಮಾನಯಾನವನ್ನು ಮಾರ್ಚ್ 27 ರಿಂದ ಮುಂದುವರಿಸಲು ನಿರ್ಧರಿಸಿದ್ದ ಕೇಂದ್ರ ಸರ್ಕಾರ, ಕೋವಿಡ್ 19 ರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಪ್ರಾರಂಭಿಸುವುದಾಗಿ ಘೋಷಣೆ ಮಾಡಿದೆ. ಇದೀಗ ಕೆಲವು ದೇಶಗಳಲ್ಲಿ ಕೊರೋನಾ ಮಿತಿಮೀರುತ್ತಿರುವುದು  ಆತಂಕಕ್ಕೆ ಕಾರಣವಾಗಿದೆ.

Join Whatsapp