ನೂತನ ಉಪ ರಾಷ್ಟ್ರಪತಿಯಾಗಿ ಜಗ್ ದೀಪ್ ಧನ್ ಕರ್ ಆಯ್ಕೆ, ಮಾರ್ಗರೇಟ್ ಆಳ್ವಗೆ ಸೋಲು

Prasthutha|

ನವದೆಹಲಿ: ಎನ್‌ಡಿಎ ಕಣಕ್ಕಿಳಿಸಿದ್ದ ಜಗದೀಪ್ ಧನ್‌ಕರ್ ದೇಶದ 14ನೇ ಉಪರಾಷ್ಟ್ರಪತಿ ಯಾಗಿ ಆಯ್ಕೆಗೊಂಡಿದ್ದಾರೆ.

- Advertisement -

ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದ ಧನ್‌ ಕರ್ ಅವರನ್ನು ಎನ್‌ ಡಿಎ ಕಣಕ್ಕಿಳಿಸಿತ್ತು‌. ಧನ್‌ ಕರ್ ಒಟ್ಟು 528 ಮತಗಳನ್ನು ಪಡೆದರೆ, ಯುಪಿಯ ಅಭ್ಯರ್ಥಿ ಮಂಗಳೂರು ಮೂಲದ ಮಾರ್ಗರೆಟ್ ಆಳ್ವ 182 ಮತಗಳನ್ನು ಪಡೆದಿದ್ದಾರೆ.

1951 ಮೇ 18ರಂದು ರಾಜಸ್ತಾನದ ಕಿತಾನಾದಲ್ಲಿ ಜನಿಸಿದ ಧನ್‌ ಕರ್, ಭಾರತೀಯ ಜನತಾ ಪಕ್ಷ ಸೇರುವುದಕ್ಕೂ ಮೊದಲು ಜನತಾ ದಳ ಮತ್ತು ಕಾಂಗ್ರೆಸ್‌ ನಲ್ಲೂ ಕಾರ್ಯನಿರ್ವಹಿಸಿದ್ದರು.

- Advertisement -

1989ರಲ್ಲಿ ರಾಜಸ್ತಾನದ ಜುಂಜುನು ಲೋಕಸಭಾ ಕ್ಷೇತ್ರದಿಂದ ಜನತಾ ದಳದಿಂದ  ಸ್ಪರ್ಧಿಸಿ ಲೋಕಸಭೆಗೆ ಕಾಲಿಟ್ಟಿದ್ದ ಧನ್‌ ಕರ್, 1990ರಲ್ಲಿ ಪ್ರಧಾನಿ ಚಂದ್ರಶೇಖರ್ ಅವರ ಸರಕಾರದಲ್ಲಿ ಪಾರ್ಲಿಮೆಂಟ್ ಅಫೇರ್ಸ್ ನ ರಾಜ್ಯ ಸಚಿವರಾಗಿದ್ದರು.

1993ರಲ್ಲಿ ಕಿಶನ್‌ಘರ್ ಕ್ಷೇತ್ರದಿಂದ ಸ್ಪರ್ಧಿಸಿ ರಾಜಸ್ತಾನ ವಿಧಾನಸಭೆ ಪ್ರವೇಶಿಸಿದ್ದರು. 2019ರಿಂದ 2022ರ ಅವಧಿಯ ವರೆಗೆ ಧನ್‌ಕರ್ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದರು.

71 ವರ್ಷದ ಜಗದೀಪ್ ಧನ್‌ಕರ್ ವೃತ್ತಿಯಲ್ಲಿ ವಕೀಲರಾಗಿದ್ದು, ಸಕ್ರೀಯ ರಾಜಕಾರಣಕ್ಕೆ ಸೇರಿದ ಬಳಿಕ ವಕೀಲಿ ವೃತ್ತಿಯನ್ನು ಕೈಬಿಟ್ಟಿದ್ದರು.

ಇದೇ ತಿಂಗಳ 11ರಂದು ಅವರು ಉಪರಾಷ್ಟ್ರಪತಿ ಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.



Join Whatsapp