ತೆಲಂಗಾಣ ಸಿಎಂ ಕೆಸಿಆರ್‌ ವಿರುದ್ಧ ಈಟಲ ರಾಜೇಂದ್ರ ಬಿಜೆಪಿ ಅಭ್ಯರ್ಥಿ

Prasthutha|


ಹೈದರಾಬಾದ್‌: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ವಿರುದ್ಧ ಗಜ್ವೆಲ್‌ ಕ್ಷೇತ್ರದಲ್ಲಿ ಶಾಸಕ ಈಟಲ ರಾಜೇಂದ್ರ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.

- Advertisement -

ಈಟಲ ರಾಜೇಂದ್ರ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದ್ದು, ಅವರು ಪ್ರತಿನಿಧಿಸುತ್ತಿರುವ ಹುಜೂರಾಬಾದ್‌ನಿಂದಲೂ ಕಣಕ್ಕಿಳಿದಿದ್ದಾರೆ. ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಕುರಿತು ರಾಜೇಂದ್ರ ಅವರು ಈ ಹಿಂದೆಯೇ ಸುಳಿವು ನೀಡಿದ್ದರು. ಈಟಲ ರಾಜೇಂದ್ರ ಭೂ ಅಕ್ರಮ ಆರೋಪದ ಬಳಿಕ ಟಿಆರ್‌ಎಸ್‌ ತೊರೆದಿದ್ದ ತೆಲಂಗಾಣದ ಮಾಜಿ ಸಚಿವ ಬಿಜೆಪಿಗೆ ಸೇರ್ಪಡೆಯಾಗಿದ್ದರು.

2023 ರ ತೆಲಂಗಾಣ ರಾಜ್ಯದ ಎಲ್ಲಾ 119 ಶಾಸಕರನ್ನು ಆಯ್ಕೆ ಮಾಡಲು  ಚುನಾವಣೆಯು 3 ನವೆಂಬರ್ 2023ರಿಂದ ನಡೆಯಲಿದೆ ಮತ್ತು ಡಿಸೆಂಬರ್ 5, 2023 ರಂದು ಕೊನೆಗೊಳ್ಳುತ್ತದೆ.

- Advertisement -

Join Whatsapp