ಬಿಜೆಪಿ-ಜೆಡಿಎಸ್ ಸ್ಥಾನ ಹಂಚಿಕೆ ಚರ್ಚೆ ಸದ್ಯಕ್ಕಿಲ್ಲ

Prasthutha|

ಬೆಂಗಳೂರು: ಎನ್‌ಡಿಎ ಮೈತ್ರಿಕೂಟ ಬೆಂಬಲಿಸಿರುವ ಜೆಡಿಎಸ್‌ ಸ್ಥಾನ ಹಂಚಿಕೆಯ ಮಾತುಕತೆ ನಡೆಸಿಲ್ಲ ಎಂದು ತಿಳಿದು ಬಂದಿದೆ. ಪಂಚರಾಜ್ಯಗಳ ಚುನಾವಣೆಯ ಬಳಿಕವಷ್ಟೇ ಸ್ಥಾನ ಹಂಚಿಕೆ ಬಗ್ಗೆ ಮಾತುಕತೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ. ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ವರಿಷ್ಠರು ಮಗ್ನರಾಗಿದ್ದು, ಸದ್ಯ ಜೆಡಿಎಸ್‌ ಜತೆಗೆ ಸ್ಥಾನ ಹಂಚಿಕೆಯ ಮಾತುಕತೆ ನಡೆಸುವ ಲಕ್ಷಣಗಳಿಲ್ಲ.

- Advertisement -

ಪಂಚರಾಜ್ಯಗಳ ಚುನಾವಣೆಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಸಾಕಷ್ಟು ಕಸರತ್ತು ನಡೆಸುತ್ತಿದ್ದು, ಈ ಹಂತದಲ್ಲಿ ಲೋಕಸಭೆ ಚುನಾವಣೆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ.

ಐದು ರಾಜ್ಯಗಳ ಚುನಾವಣಾ ಫ‌ಲಿತಾಂಶ ಹೊರಬಿದ್ದ ಬಳಿಕ ಕರ್ನಾಟಕ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಈ ಸಮಯದಲ್ಲಿ ಮೈತ್ರಿಯ ಮುಂದುವರಿದ ಮಾತುಕತೆ ನಡೆಯುವ ಸಾಧ್ಯತೆ ಇದೆ. ಪ್ರಸ್ತುತ ಮೈತ್ರಿ ವಿಚಾರದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ಭಿನ್ನಾಭಿಪ್ರಾಯಗಳಿದ್ದು, ಅದನ್ನೂ ಅಷ್ಟರೊಳಗೆ ಶಮನ ಮಾಡಿಕೊಳ್ಳುವ ಸವಾಲು ಎರಡೂ ಪಕ್ಷಗಳ ಮುಂದಿದೆ.