ಮಂಗಳೂರಿನಲ್ಲಿ  ಸರ್ವಿಸ್ ರಿವಾಲ್ವರ್​ನಿಂದ ಗುಂಡು ಹಾರಿಸಿಕೊಂಡು ಪಿಎಸ್ಐ ಆತ್ಮಹತ್ಯೆ

Prasthutha|

 ಮಂಗಳೂರು: ಮಂಗಳೂರಿ  ನವಮಂಗಳೂರು ಬಂದರಿನ ಮುಖ್ಯ ದ್ವಾರದ ಬಳಿ ಪಿಎಸ್ಐ ಓರ್ವರು  ತನ್ನದೇ ಸರ್ವಿಸ್ ರಿವಾಲ್ವರ್​ನಿಂದ ಗುಂಡು ಹಾರಿಸಿಕೊಂಡು ಆತ್ಮತ್ಯೆಗೈದಿದ್ದಾರೆ. ಸಿಐಎಸ್‌ಎಫ್ ನ  ರಾಯಚೂರು ಮೂಲದ ಝಾಕೀರ್ ಹುಸೈನ್ (58) ಆತ್ಮತ್ಯೆಗೈದವರು.  ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಲ್ಲಿ ಪಿಎಸ್​ಐ ಝಾಕೀರ್ ಹುಸೈನ್ ಕರ್ತವ್ಯ ನಿರ್ವಹಿಸುತ್ತಿದ್ದರು.

- Advertisement -

ಎನ್‌ಎಂಪಿಟಿ ಮುಖ್ಯದ್ವಾರದಲ್ಲಿ ರಾತ್ರಿ ಪಾಳಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಂದು ಬೆಳಿಗ್ಗೆ 6:30ಕ್ಕೆ ರಾತ್ರಿ ಪಾಳಿ ಕರ್ತವ್ಯ ಮುಗಿಸಿ ಶೌಚಾಲಯಕ್ಕೆ ಹೋಗಿದ್ದ ವೇಳೆ, ಶೌಚಾಲಯದಲ್ಲೇ ತನ್ನ ಸರ್ವೀಸ್ ಪಿಸ್ತೂಲ್ ನಿಂದ ಗುಂಡು ಹಾರಿಸಿಕೊಂಡು ಆತ್ಮತ್ಯೆ ಶರಣಾಗಿದ್ದಾರೆ. ಘಟನೆ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ಸಂಬಂಧವಾಗಿ ತನಿಖೆ ನಡೆಯುತ್ತಿದೆ.                                        

Join Whatsapp