ಕೆಜಿಎಫ್ ಬಾಬುಗೆ ಐಟಿ ಶಾಕ್: 30ಕ್ಕೂ ಅಧಿಕ ಅಧಿಕಾರಿಗಳ ತಂಡದಿಂದ ಶೋಧ

Prasthutha|

ಬೆಂಗಳೂರು: ಇತ್ತೀಚಿಗೆ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದ ಕೆಜಿಎಫ್ ಬಾಬು ಅಲಿಯಾಸ್ ಉಮ್ರಾ ಬಾಬು ನಿವಾಸದ ಮೇಲೆ ಇಂದು ಆದಾಯ ತೆರಿಗೆ (ಐಟಿ)ಅಧಿಕಾರಿಗಳು ದಾಳಿ ನಡೆಸಿದ್ದಾರೆ.

- Advertisement -

ವಸಂತನಗರದ ಮನೆ ಕಚೇರಿ ಮೇಲೆ ಬೆಳಗ್ಗೆ 7.30 ರಿಂದ ಐಟಿ ಅಧಿಕಾರಿಗಳು ಬಿಗಿ ಪೊಲೀಸ್ ಭಧ್ರತೆಯ ನಡುವೆ ನಡೆಸಿರುವ ದಾಳಿ ಮುಂದುವರೆದಿದೆ.

ಕೆಜಿಎಫ್ ಬಾಬು ಮನೆ, ರುಕ್ಸನಾ ಪ್ಯಾಲೇಸ್ ಮೇಲೆ 30ಕ್ಕೂ ಐಟಿ ಅಧಿಕಾರಿಗಳ ತಂಡ  ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿ ಮಾಹಿತಿಯನ್ನು ಸಂಗ್ರಹಿಸ ತೊಡಗಿದ್ದಾರೆ.

- Advertisement -

1,745 ಕೋಟಿ ಆಸ್ತಿ: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್  ಚುನಾವಣೆಗೆ ಕಾಂಗ್ರೆಸ್ ನಿಂದ ನಾಮಪತ್ರ ಸಲ್ಲಿಸಿದ್ದ ಬಾಬು ಅವರು 97.98 ಕೋಟಿ ರೂ. ಮೌಲ್ಯದ ಚರಾಸ್ತಿ, 1643.59 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಸೇರಿ ಒಟ್ಟು 1,741.57 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದರು.

ಪತ್ನಿಯರು, ಅವಲಂಬಿತರು ಸೇರಿ ಅವರ ಒಟ್ಟು ಆಸ್ತಿ ಬರೋಬ್ಬರಿ 1745 ಕೋಟಿ ರೂ. ತಲುಪುತ್ತದೆ. ರಾಜ್ಯ ರಾಜಕಾರಣದ ಮಟ್ಟಿಗೆ ಇದೊಂದು ದಾಖಲೆಯೇ ಆಗಿತ್ತು.

14.89 ಲಕ್ಷ ಆದಾಯ: ಯೂಸುಫ್ ಷರೀಫ್ 2017 – 18ರಲ್ಲಿ 14.89 ಲಕ್ಷ ರೂ. ಆದಾಯ ಪಡೆದಿರುವುದಾಗಿ ಘೋಷಿಸಿಕೊಂಡಿದ್ದಾರೆ. 2018 – 19ರಲ್ಲಿ 42.35 ಲಕ್ಷ ರೂ., 2019 – 20ರಲ್ಲಿ 49.74 ಲಕ್ಷ ರೂ., 2020 – 21ರಲ್ಲಿ 15.86 ಲಕ್ಷ ರೂ. ಆದಾಯ ಪಡೆದುಕೊಂಡಿರುವುದಾಗಿ ಅಫಿಡವಿಟ್ ನಲ್ಲಿ ಹೇಳಿಕೊಂಡಿದ್ದಾರೆ.

ಬಾಂಡ್, ಷೇರುಗಳು, ಮ್ಯೂಚುವಲ್ ಫಂಡ್ ಗಳಲ್ಲಿ ಷರೀಫ್ 17.62 ಕೋಟಿ ರೂ. ಹೂಡಿಕೆ ಮಾಡಿದ್ದರೆ, ಮೊದಲ ಪತ್ನಿ 1.60 ಲಕ್ಷ ರೂ., ಎರಡನೇ ಪತ್ನಿ 75 ಸಾವಿರ ಹೂಡಿಕೆ ಮಾಡಿದ್ದಾರೆ. ಐದು ಕನ್ ಸ್ಟ್ರಕ್ಷನ್ ಕಂಪನಿಗಳಲ್ಲಿ ಯೂಸುಫ್ ಷರೀಫ್ ಹಣ ಹೂಡಿಕೆ ಮಾಡಿದ್ದು ಒಟ್ಟು 17.61 ಕೋಟಿ ರೂ. ಹೂಡಿಕೆ ಮಾಡಿದ್ದಾರೆ.

58.12 ಕೋಟಿ ರೂ.ಗಳನ್ನು ಇತರರಿಗೆ ಸಾಲವಾಗಿ ನೀಡಿದ್ದಾರೆ. ಆಸ್ತಿ ಖರೀದಿಗೆ ಮುಂಗಡವಾಗಿ ಯೂಸುಫ್ ಷರೀಫ್ 11.44 ಕೋಟಿ ರೂ. ನೀಡಿದ್ದರೆ, ವಾಹನ ಖರೀದಿಗೆ 1.72 ಕೋಟಿ ರೂ. ಹಾಗೂ ಇತರರಿಗೆ ಸಾಲವಾಗಿ 44.94 ಕೋಟಿ ರೂ. ನೀಡಿದ್ದಾರೆ.

 ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದ ಕೆಜಿಎಫ್ ಬಾಬು  2023ರ ವಿಧಾನಸಭಾ ಚುನಾವಣೆಗೆ ಕೋಲಾರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿ ಈಗಾಗಲೇ ಸಿದ್ಧತೆ ನಡೆಸುತ್ತಿದ್ದ ಬೆನ್ನಲ್ಲೇ ಆದಾಯ ತೆರಿಗೆ ದಾಳಿ ನಡೆಸಲಾಗಿದೆ.

Join Whatsapp