ಹಿಜಾಬ್ ಪರ ವಾದಿಸುತ್ತಿರುವ ವಕೀಲರನ್ನು ಟೀಕಿಸುವುದು ತಪ್ಪು: ರಾಮಕೃಷ್ಣ ಆಶ್ರಮ

Prasthutha|

ಕಾರವಾರ: ಕಾಲೇಜುಗಳಲ್ಲಿ ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್‌ ಧರಿಸುವ ಕುರಿತಾದ ಅನಾವಶ್ಯಕ ಚರ್ಚೆಯು ಶಾಂತಿ ಮತ್ತು ಸೌಹಾರ್ದತೆಯ ಹಿತದೃಷ್ಟಿಯಿಂದ ಸರಿಯಲ್ಲ ಎಂದು ಕಾರವಾರದ ರಾಮಕೃಷ್ಣ ಆಶ್ರಮ ಹೇಳಿದೆ.

- Advertisement -

ಶಾಲೆ ಅಥವಾ ಕಾಲೇಜುಗಳಲ್ಲಿ ಮುಸ್ಲಿಂ ಹೆಣ್ಣುಮಕ್ಕಳ ವಸ್ತ್ರಧಾರಣೆಯ ಬಗ್ಗೆ ಅನಗತ್ಯ ಚರ್ಚೆ ನಡೆಯುತ್ತಿದೆ. ಸಮಾಜದ ವಿವಿಧ ಹಂತಗಳಲ್ಲಿ ಈ ವಿಷಯ ತೀವ್ರ ವಿವಾದಕ್ಕೆ ಕಾರಣವಾಗುತ್ತಿರುವುದು ತೀವ್ರ ನೋವುಂಟುಮಾಡಿದೆ. ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯ ಹಿತಾಸಕ್ತಿಯಿಂದ ಇದು ಖಂಡಿತವಾಗಿಯೂ ಒಳ್ಳೆಯದಲ್ಲ. ತಮ್ಮ ಮೂಲಭೂತ ಹಕ್ಕಿಗಾಗಿ ಹೋರಾಡುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯರ ಪರ ವಕಾಲತ್ತು ವಹಿಸಿ  ಇಸ್ಲಾಮಿಕ್ ಧರ್ಮಗ್ರಂಥಗಳನ್ನು ಉಲ್ಲೇಖಿಸುವ ಮೂಲಕ ಬಲಪಂಥೀಯ ಟೀಕಾಕಾರರ ಕೆಂಗಣ್ಣಿಗೆ ಗುರಿಯಾಗಿರುವ ಹಿರಿಯ ವಕೀಲ ದೇವದತ್ತ ಕಾಮತ್ ಅವರು ಹಿಂದೂ ಧರ್ಮಕ್ಕೆ ಯಾವುದೇ ಹಾನಿ ಮಾಡಿಲ್ಲ ಎಂದು ರಾಮಕೃಷ್ಣ ಆಶ್ರಮದ ಪ್ರಧಾನ ಸ್ವಾಮೀಜಿ ಸ್ವಾಮಿ ಭಾವೇಶಾನಂದ ಸಮರ್ಥನೆ ನೀಡಿದ್ದಾರೆ.

ಉಡುಪಿಯ ಕಾಲೇಜಿನಲ್ಲಿ ಹಿಜಾಬ್ ಧರಿಸದಂತೆ ಹೇಳಿರುವ ವಿದ್ಯಾರ್ಥಿಗಳ ಪರ ವಾದ ಮಂಡಿಸಿದ ದೇವದತ್ತ ಕಾಮತ್ “ಧಾರ್ಮಿಕ ಶಿರಸ್ತ್ರಾಣಗಳು ಅವರ ಸಂಸ್ಕೃತಿಯ ಭಾಗವಾಗಿದ್ದು, ಅದನ್ನು ತಡೆಯಲು ಸಾಧ್ಯವಿಲ್ಲ. ನಿಕಟ ಕುಟುಂಬ ಸದಸ್ಯರನ್ನು ಹೊರತುಪಡಿಸಿ ಬೇರೆಯವರ ಮುಂದೆ ತಲೆಯನ್ನು ಮುಚ್ಚಿಕೊಳ್ಳುವುದು ಮಹಿಳೆಯರಿಗೆ ಕಡ್ಡಾಯವಾಗಿದೆ” ಎಂದು ಹೇಳುವ ಕುರ್ಆನಿನ ಸಾಲುಗಳನ್ನು ಉಲ್ಲೇಖಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು.

- Advertisement -

”ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರಾದ ದೇವದತ್ತ ಕಾಮತ್ ನ್ಯಾಯಾಲಯದಲ್ಲಿ ವಕೀಲರಾಗಿ ಒಂದು ಪಕ್ಷವನ್ನು ಪ್ರತಿನಿಧಿಸಿದ್ದಾರೆ. ಕೆಲವು ಅಂಶಗಳು ಅವರನ್ನು ಹಿಂದೂ ಧರ್ಮದ ವಿರೋಧಿ ಎಂದು ಚಿತ್ರಿಸಲು ಪ್ರಯತ್ನಿಸುತ್ತಿವೆ. ಈ ಗ್ರಹಿಕೆಯು ಸಂಪೂರ್ಣ ಅನಗತ್ಯ ಮತ್ತು ಆಧಾರರಹಿತವಾಗಿದೆ. ನ್ಯಾಯಾಲಯದಲ್ಲಿ ಕಕ್ಷಿದಾರನನ್ನು ಪ್ರತಿನಿಧಿಸುವ ವಕೀಲರು ನ್ಯಾಯವನ್ನು ಕೊಡಿಸುವ ಕೆಲಸ ಮಾಡಬೇಕು. ಅದು ವೃತ್ತಿಪರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಇದನ್ನು ಹಿಂದೂ ಧರ್ಮದ ವಿರುದ್ಧ ಎಂದು ಹೇಳಬಾರದು” ಎಂದು ಸ್ವಾಮಿ ಭಾವೇಶಾನಂದ ತಿಳಿಸಿದ್ದಾರೆ.



Join Whatsapp