ಮಂಗಳೂರು: ನ್ಯಾಚುರಲ್ಸ್‌ ಐಸ್ ಕ್ರೀಂ ಸ್ಥಾಪಕ ರಘುನಂದನ್ ಕಾಮತ್ ನಿಧನ

Prasthutha|

- Advertisement -

ಮುಂಬೈ: ನ್ಯಾಚುರಲ್ಸ್‌ ಐಸ್‌ ಕ್ರೀಂ ಸಂಸ್ಥೆಯ ಸ್ಥಾಪಕ ಮಂಗಳೂರು ಮೂಲದ ರಘುನಂದನ್‌ ಕಾಮತ್‌ (75) ಅವರು ಶುಕ್ರವಾರ ನಿಧನರಾಗಿದ್ದಾರೆ.

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ.

- Advertisement -

ಇವರು ಪತ್ನಿ, ಪುತ್ರರನ್ನು ಅಗಲಿದ್ದಾರೆ. ಮೂಲ್ಕಿಯಲ್ಲಿ ಜನಿಸಿದ್ದ ರಘುನಂದನ್‌ ಅವರು ತಮ್ಮ ತಂದೆಯಿಂದ ಹಣ್ಣಿನ ವ್ಯಾಪಾರ ಹಾಗೂ ಹಣ್ಣಿನ ವೈಶಿಷ್ಟ್ಯತೆಗಳನ್ನು ಸರಿಯಾಗಿ ಅರಿತುಕೊಂಡಿದ್ದರು. ಇವರು ತಮ್ಮ 14ನೇ ವಯಸ್ಸಿನಲ್ಲಿ ಶಾಲೆ ತೊರೆದು ಮುಂಬೈಗೆ ತೆರಳಿ ಅಲ್ಲಿ ಸೋದರರ ಹೋಟೆಲ್‌ ನಲ್ಲಿ ಕೆಲಸ ಆರಂಭಿಸಿದ್ದರು. ಬಳಿಕ 1984ರಲ್ಲಿ ನ್ಯಾಚುರಲ್‌ ಐಸ್‌ಕ್ರೀಂ ಎಂಬ ಸಂಸ್ಥೆಯನ್ನು ಕೇವಲ 4 ಸಿಬ್ಬಂದಿಯಿಂದ ಆರಂಭಿಸಿದ್ದರು.ರಘುನಂದನ್‌ ಅವರ ನ್ಯಾಚುರಲ್‌ ಐಸ್‌ಕ್ರೀಂ ಪ್ರಸ್ತುತ 135ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದ್ದು, ವಾರ್ಷಿಕವಾಗಿ 400 ಕೋಟಿ ರು.ಗೂ ಅಧಿಕ ವಹಿವಾಟು ನಡೆಸುತ್ತಿದೆ.

Join Whatsapp