ಸೆಲ್ಫಿ ತೆಗೆಯುತ್ತಿದ್ದಾಗ ರೈಲು ಡಿಕ್ಕಿ: ಇಬ್ಬರು ಸಾವು

Prasthutha|

ಪಶ್ಚಿಮ ಬಂಗಾಳ: ರೈಲ್ವೆ ಹಳಿ ಮೇಲೆ ನಿಂತು ಸೆಲ್ಫಿ ತೆಗೆಯುತ್ತಿದ್ದಾಗ ರೈಲು ಡಿಕ್ಕಿ ಹೊಡೆದು ಇಬ್ಬರು ಸಾವನ್ನಪ್ಪಿದ್ದು, ಓರ್ವ ಗಾಯಗೊಂಡ ಘಟನೆ ಮಿಡ್ನಾಪುರದಲ್ಲಿ ನಡೆದಿದೆ.

- Advertisement -

ಮಿಡ್ನಾಪುರದ ಕೋಸ್ಸೆ ನದಿ ಮೇಲಿನ ರೈಲ್ವೆ ಹಳಿ ಬಳಿ ಮೂವರು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಲೋಕಲ್ ಟ್ರೈನ್ ಆಗಮಿಸಿದೆ. ರೈಲು ಬರುವುದನ್ನು ಯುವಕರು ಗಮನಿಸಿಲ್ಲ. ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಒಬ್ಬ ಗಾಯಗೊಂಡಿದ್ದಾನೆ. ಗಾಯಾಳುವನ್ನು ರಕ್ಷಣೆ ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.



Join Whatsapp