ಬೆಂಗಳೂರು: ಇಲ್ಲಿನ ಬಳ್ಳಾರಿ ರಸ್ತೆಯಲ್ಲಿರುವ ಡಿಸೈನ್ ಬಾಕ್ಸ್ ಕಂಪನಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಏಕಕಾಲಕ್ಕೆ ಪಂಜಾಬ್, ದೆಹಲಿ ಹಾಗೂ ಕರ್ನಾಟಕದಲ್ಲಿರುವ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.
ಡಿಸೈನ್ ಬಾಕ್ಸ್ ಸಂಸ್ಥೆಯು ಖಾಸಗಿಯಾಗಿ ಡಿಕೆ ಶಿವಕುಮಾರ್ ಅವರ ಚುನಾವಣಾ ಸಮೀಕ್ಷೆ ಜವಾಬ್ದಾರಿ ಹೊತ್ತಿತ್ತು. ಕಳೆದ ತಿಂಗಳು ಸಂಸ್ಥೆಯ ಜೊತೆ ಡಿ ಕೆ ಶಿವಕುಮಾರ್ ಒಪ್ಪಂದ ಕಡಿದುಕೊಂಡಿದ್ದರು. ಅಲ್ಲದೆ ಕಾಂಗ್ರೆಸ್ ನ ಬಹುತೇಕ ನಾಯಕರಿಗೆ ಈ ಕಂಪನಿ ಪ್ರಚಾರ ನಡೆಸಿದೆ ಎನ್ನಲಾಗಿದೆ.