ಎಸ್ ಎಂ ಎಸ್ ಅರೆಬಿಕ್ ಕಾಲೇಜಿನ ಉಪಾಧ್ಯಕ್ಷ, ಕೊಡುಗೈ ದಾನಿ ಎಫ್ ಎ ಮಹಮ್ಮದ್ ಹಾಜಿ ನಿಧನಕ್ಕೆ ಪಾಪ್ಯುಲರ್ ಫ್ರಂಟ್ ಸಂತಾಪ

Prasthutha|

ಕೊಡಗು: ಮಡಿಕೇರಿಯ ಅಲ್ ಅಮೀನ್ ಸಂಸ್ಥೆಯ ಅಧ್ಯಕ್ಷರೂ, ಸುಂಟಿಕೊಪ್ಪದ ಎಸ್ ಎಂ ಎಸ್ ಅರೇಬಿಕ್ ಕಾಲೇಜಿನ ಉಪಾಧ್ಯಕ್ಷರೂ,ಮಡಿಕೇರಿ ನಿವೃತ್ತ ಉಪ ತಹಶಿಲ್ದಾರರು ಆಗಿದ್ದ ಎಫ್ ಎ ಮುಹಮ್ಮದ್ ಹಾಜಿ ಮಡಿಕೇರಿಯವರ ನಿಧನಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೊಡಗು ಜಿಲ್ಲಾ ಸಮಿತಿ ತೀವ್ರ ಸಂತಾಪ ಸೂಚಿಸಿದೆ.

- Advertisement -

ಹಲವು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಡಿದ್ದ ಅವರು ಕೊಡಗು ಜಿಲ್ಲೆಯಲ್ಲಿ ಹಲವಾರು ಅನಾಥ, ಬಡ ನಿರ್ಗತಿಕ ಹೆಣ್ಣು ಮಕ್ಕಳ ಮದುವೆಗೆ ನೇತೃತ್ವ ವಹಿಸಿಕೊಂಡು ಸಹಾಯ ಹಸ್ತ ಚಾಚಿ ನೆರವಾಗುತ್ತಿದ್ದರು.ಧಾರ್ಮಿಕ ಮತ್ತು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದ ಇವರ ಅಗಲುವಿಕೆಯು ಸಮಾಜಕ್ಕೆ ಮತ್ತು ಮುಸ್ಲಿಂ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಪಿಎಫ್ ಐ ಕೊಡಗು ಜಿಲ್ಲಾಧ್ಯಕ್ಷ ಶೌಕತ್ ಅಲಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.



Join Whatsapp