ಮತ್ತೆ ಫೆಲೆಸ್ತೀನಿಯರ ಮೇಲೆ ಇಸ್ರೇಲ್​ ವೈಮಾನಿಕ ದಾಳಿ

Prasthutha|

ಗಾಝಾ : ಫೆಲೆಸ್ತೀನಿನ ಗಾಝಾ ಪ್ರದೇಶದಲ್ಲಿ ವೈಮಾನಿಕ ದಾಳಿ ನಡೆಸಿ ಸುಮಾರು 15 ಕಿಲೋಮೀಟರ್ ಉದ್ದದ ಬಹುದೊಡ್ಡ ಸುರಂಗಗಳು ಮತ್ತು ಒಂಬತ್ತು ಹಮಾಸ್ ಕಮಾಂಡರ್ ಗಳ ಮನೆಗಳನ್ನು ಇಸ್ರೇಲ್ ಧ್ವಂಸಗೊಳಿಸಿದೆ.

ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದ್ದು, ಇಸ್ರೇಲ್ ಕಳೆದ ಒಂದು ವಾರದಿಂದ ಗಾಝಾ ಪಟ್ಟಣದ ಮೇಲೆ ನಿಂತರ ದಾಳಿ ನಡೆಸುತ್ತಿದೆ. ಇಸ್ರೇಲ್​ ಮಿಲಿಟರಿ ಹಮಾಸ್‌ನ ನಾಯಕರ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿಗಳನ್ನು ನಡೆಸಿದೆ. ದಾಳಿಯಿಂದ ಮೃತಪಟ್ಟವರ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ.

- Advertisement -

ಹಿಂದಿನ ದಾಳಿಯಲ್ಲಿ 42 ಮಂದಿ ಮೃತಪಟ್ಟಿದ್ದರು ಜತೆಗೆ ಮೂರು ಕಟ್ಟಡಗಳು ನೆಲಸಮಗೊಂಡಿದ್ದವು.

- Advertisement -