ಅರಬ್ ಜಗತ್ತಿಗೆ ಇಸ್ರೇಲ್ ಪೈಪ್ ಲೈನ್ ವಿಸ್ತರಿಸಲು ಅಮೆರಿಕಾ ಯೋಜನೆ

Prasthutha|

ಚಿಕಾಗೊ: ಯು.ಎ.ಇ ಮತ್ತು ಬಹ್ರೈನ್ ನೊಂದಿಗೆ ಇಸ್ರೇಲ್ ಸಹಿ ಹಾಕಿರುವ ಶಾಂತಿ ಒಪ್ಪಂದವು ಇಂಧನ ವ್ಯಾಪಾರವನ್ನು ವಿಸ್ತರಿಸಲು ಅಡಿಗಲ್ಲಾಗಲಿದೆ ಎಂದು ಅಮೆರಿಕಾದ ಇಂಧನ ಕಾರ್ಯದರ್ಶಿ ಡೆನಿಯಲ್ ಬ್ರುಯಿಲೆಟ್ ಹೇಳಿದ್ದಾರೆ.

- Advertisement -

ತೈಲ ಮತ್ತು ಇತರ ಇಂಧನ ಸಂಪನ್ಮೂಲಗಳ ಸಾಗಾಟಕ್ಕಾಗಿನ ಇಸ್ರೇಲ್ ನ ಟ್ರಾನ್ಸ್ ಇಸ್ರೇಲ್ ಕೊಳವೆ (TIPline)ಯನ್ನು ವಿಸ್ತರಿಸುವುದಕ್ಕಾಗಿ ಟ್ರಂಪ್ ಆಡಳಿತವು ಒಮಾನ್, ಸುಡಾನ್, ಮೊರಕ್ಕೊ, ಫೆಲೆಸ್ತೀನ್ ಪ್ರಾಧಿಕಾರ, ಸೌದಿ ಅರೇಬಿಯಾ ಮತ್ತು ಜೋರ್ಡಾನ್ ಸೇರಿದಂತೆ ಅರಬ್ ರಾಷ್ಟ್ರಗಳನ್ನು ಸೇರಿಸಲು ವೇಗದ ಹೆಜ್ಜೆಯನ್ನು ಇಡುತ್ತಿದೆ.

ಈ ಕೊಳವೆ ಮಾರ್ಗವು ದಕ್ಷಿಣ ಇಸ್ರೇಲ್ ನ ಗಲ್ಫ್ ಆಫ್ ಅಕಬಾದಿಂದ ಉತ್ತರ ಗಾಝಾ ಪಟ್ಟಿಯ ಅಶ್ಕೆಲೋನ್ ನ ಮೆಡಿಟರೀನಿಯನ್ ಬಂದರ್ ತನಕ ವಿಸ್ತರಣೆಗೊಳ್ಳುತ್ತದೆ.

- Advertisement -

ಇದನ್ನು ಸುಯೇಜ್ ಕಾಲುವೆಯ ಮೂಲಕ ಇಂಧನ ಸಾಗಾಟಕ್ಕಾಗಿ 1968ರಲ್ಲಿ ಇರಾನ್ ನ ಶಾರ ಪಾಲುದಾರಿಕೆಯೊಂದಿಗೆ  ನಿರ್ಮಿಸಲಾಗಿತ್ತು. ಏಶ್ಯನ್ ರಾಷ್ಟ್ರಗಳಿಗೆ ತೈಲ ಸರಬರಾಜು ಮಾಡುವುದಕ್ಕಾಗಿ ನಂತರ ಇಸ್ರೇಲ್ ರಶ್ಯಾದೊಂದಿಗೆ ಕೆಲಸ ಮಾಡಿತ್ತು.

“ಇಸ್ರೇಲ್ ಮತ್ತು ಈಜಿಪ್ಟ್ ಮಧ್ಯೆ ಭೂಪ್ರದೇಶಗಳುದ್ದಕ್ಕೂ ಅನಿಲ ಸಾಗಾಟಕ್ಕೆ ಸಂಬಂಧಿಸಿದಂತೆ ಉತ್ತಮ ಕೆಲಸ ನಡೆದಿದೆ. ಈ ಕೊಳವೆ ಗಳ ಮೂಲಕ ಕಚ್ಛಾ ತೈಲ ಮತ್ತು ಇತರ ಉತ್ಪಾದನೆಗಳ ಚಲನೆಗೆ ಅವಕಾಶವಾಗಲಿದೆಯೆಂದು ನಾವು ಭಾವಿಸುತ್ತೇವೆ” ಎಂದು ಬ್ರುಯಿಲೆಟ್ ಹೇಳಿದರು.

ಇಸ್ರೇಲ್, ಯುಎಇ ಮತ್ತು ಬಹ್ರೈನ್ ಗಳು ಸಹಿ ಹಾಕಿರುವ ಅಬ್ರಹಾಂ ಒಪ್ಪಂದ ಇತರ ಅರಬ್ ರಾಷ್ಟ್ರಗಳಿಗೂ ಈ ಯೋಜನೆ ವಿಸ್ತರಿಸಲು ಅವಕಾಶ ಮಾಡಿಕೊಡಲಿದೆ.

Join Whatsapp