ಒವೈಸಿಯನ್ನು ಹಣಕ್ಕಾಗಿ ಖರೀದಿಸುವವರು ಹುಟ್ಟಿಲ್ಲ : ಅಸಾದುದ್ದೀನ್ ಒವೈಸಿ

Prasthutha|

ಕೊಲ್ಕತಾ : ಒವೈಸಿಯನ್ನು ಹಣಕ್ಕಾಗಿ ಖರೀದಿಸುವವರು ಹುಟ್ಟಿಲ್ಲ ಎಂದು ಎಐಎಂಐಎಂ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ ಅವರು ಈ ಮಾತುಗಳನ್ನಾಡಿದ್ದಾರೆ.

- Advertisement -

“ಅಸಾದುದ್ದೀನ್ ಒವೈಸಿಯನ್ನು ಹಣಕ್ಕಾಗಿ ಖರೀದಿಸುವ ವ್ಯಕ್ತಿ ಹುಟ್ಟಿಯೇ ಇಲ್ಲ. ಅವರ ಎಲ್ಲಾ ಆರೋಪಗಳು ಆಧಾರ ರಹಿತವಾದುದು, ಅವರು ವಿಚಲಿತರಾಗಿದ್ದಾರೆ. ಅವರು ತಮ್ಮ ಸ್ವಂತ ಮನೆಯನ್ನು ನೋಡಿಕೊಳ್ಳಲಿ, ಸಾಕಷ್ಟು ಮಂದಿ ಅವರ ಪಕ್ಷದಿಂದ ಬಿಜೆಪಿಗೆ ಸೇರುತ್ತಿದ್ದಾರೆ. ಅವರು ಬಿಹಾರದ ಮತದಾರರು ಮತ್ತು ನಮಗೆ ಮತ ನೀಡಿದವರನ್ನು ಅವಮಾನಿಸಿದ್ದಾರೆ” ಎಂದು ಒವೈಸಿ ಹೇಳಿದ್ದಾರೆ.

ಇದಕ್ಕೂ ಮೊದಲು ಮಮತಾ ಬ್ಯಾನರ್ಜಿ ಒವೈಸಿ ಅವರ ಎಐಎಂಐಎಂ ಬಗ್ಗೆ ಆರೋಪಗಳನ್ನು ಮಾಡಿದ್ದರು. ಮತಗಳನ್ನು ವಿಭಜಿಸಲು ಎಐಎಂಐಎಂ ಮೂಲಕ ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡಲಾಗುತ್ತಿದೆ. ಎಐಎಂಐಎಂ ಬಿಜೆಪಿಯ ಬಿ ಟೀಮ್ ಎಂಬರ್ಥದಲ್ಲಿ ಬ್ಯಾನರ್ಜಿ ಆಪಾದಿಸಿದ್ದರು.

- Advertisement -

ಕಳೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಗಡಿ ಪ್ರದೇಶದ ಮುಸ್ಲಿಂ ಬಾಹುಳ್ಯವುಳ್ಳ ಪ್ರದೇಶದಲ್ಲಿ ಎಐಎಂಐಎಂ ಐದು ಸ್ಥಾನಗಳನ್ನು ಗೆದ್ದಿದೆ. ಮುಂದಿನ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸಲಿದೆ ಎಂಬುದಾಗಿ ಒವೈಸಿ ಈಗಾಗಲೇ ಘೋಷಿಸಿದ್ದಾರೆ. ಹೀಗಾಗಿ ವಿಚಲಿತರಾಗಿರುವ ಬ್ಯಾನರ್ಜಿ, ಉಳಿದ ಜಾತ್ಯತೀತ ಪಕ್ಷಗಳಂತೆಯೇ ಎಐಎಂಐಎಂ ಮೇಲೆ ಬಿಜೆಪಿಗೆ ಸಹಕರಿಸುತ್ತಿದೆ ಎಂಬ ಆರೋಪ ಮಾಡಲು ಮುಂದಾಗಿದ್ದಾರೆ.     

Join Whatsapp