ದಿಹೇಗ್: ಗಾಝಾ ಪಟ್ಟಿಯಲ್ಲಿ ತಾನು ನಡೆಸುತ್ತಿರುವ ಸೇನಾ ದಾಳಿಯನ್ನು ತಕ್ಷಣವೇ ಕೊನೆಗೊಳಿಸಬೇಕೆಂಬ ದಕ್ಷಿಣ ಆಫ್ರಿಕಾದ ಬೇಡಿಕೆಯನ್ನು ತಿರಸ್ಕರಿಸುವಂತೆ ಇಸ್ರೇಲ್ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದೆ.
ಗಾಝಾದಲ್ಲಿ ಪ್ಯಾಲೆಸ್ತೀನಿಯರ ವಿರುದ್ಧ ಇಸ್ರೇಲ್ ಜನಾಂಗೀಯ ಹತ್ಯೆ ನಡೆಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿರುವ ದಕ್ಷಿಣ ಆಫ್ರಿಕಾ, ತಕ್ಷಣವೇ ಇಸ್ರೇಲ್‌ನ ಸೇನಾ ಕಾರ್ಯಾಚರಣೆ ನಿಲ್ಲಿಸಲು ನಿರ್ದೇಶನ ನೀಡಬೇಕೆಂದು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ಅರ್ಜಿಯ ಎರಡನೇ ದಿನದ ವಿಚಾರಣೆಯ ಸಮಯದಲ್ಲಿ ಇಸ್ರೇಲ್ ವಿದೇಶಾಂಗ ಸಚಿವಾಲಯದ ಕಾನೂನು ಸಲಹೆಗಾರ ಟಾಲ್ ಬೇಕರ್, ದಕ್ಷಿಣ ಆಫ್ರಿಕಾದ ಈ ಅರ್ಜಿ ಸ್ವೀಕಾರಾರ್ಹವಲ್ಲ. ಇದನ್ನು ತಿರಸ್ಕರಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.