“ಇನ್ನು ಸಹಿಸಲು ಸಾಧ್ಯವಿಲ್ಲ”: ಸುಚನಾ ಸೇಠ್ ಐಲೈನರ್‌ನಿಂದ ಬರೆದಿರುವ ಕೈಬರಹ ಪತ್ತೆ!

Prasthutha|

ಪಣಜಿ: ನಾಲ್ಕು ವರ್ಷದ ಮಗುವನ್ನು ಕೊಂದು ಬ್ಯಾಗಲ್ಲಿ ಹಾಕಿ ಪ್ರಯಾಣಿಸುವಾಗ ಬಂಧಿಸಲ್ಪಟ್ಟ ಸ್ಟಾರ್ಟ್‌ಅಪ್ ಸಂಸ್ಥಾಪಕಿ ಸುಚನಾ ಸೇಠ್ ಬರೆದಿದ್ದ ಬರಹವೊಂದು ಪತ್ತೆಯಾಗಿದೆ.

- Advertisement -

ತನ್ನ ಮಗುವಿನ ಶವ ಹಾಕಿದ್ದ ಬ್ಯಾಗೊಳಗೆ “ಇನ್ನು ಸಹಿಸಲು ಸಾಧ್ಯವಿಲ್ಲ…” ಎಂದು ಐಲೈನರ್‌ನಿಂದ ಬರೆದಿರುವ ಆರು ಸಾಲಿನ ಕೈಬರಹ ಪೊಲೀಸರಿಗೆ ಸಿಕ್ಕಿದೆ. ಇದು ಆಕೆಯ ಮನಸ್ಥಿತಿ ಮತ್ತು ಮಗುವಿನ ಹತ್ಯೆಯ ಉದ್ದೇಶವನ್ನು ತಿಳಿಸುವಂತಿದೆ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.

ಆಕೆಯ ಮಾಜಿ ಪತಿಗೆ ಮಗುವಿನೊಂದಿಗೆ ಮಾತನಾಡಲು ಅವಕಾಶ ಮಾಡಿಕೊಡಲು ನ್ಯಾಯಾಲಯ ಆದೇಶಿಸಿದ್ದನ್ನೇ ಸುಚನಾ ಸೇಠ್, ” ಇನ್ನು ಸಹಿಸಲು ಸಾಧ್ಯವಿಲ್ಲ‌..” ಎಂದು ಬರೆದಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಪೊಲೀಸರು ಕೈಬರಹವನ್ನು ವಿಧಿವಿಜ್ಞಾನ ಪರಿಶೀಲನೆಗೆ ಕಳುಹಿಸಿದ್ದಾರೆ.

- Advertisement -

ಅವಳು ತನ್ನ ವೈದ್ಯರೊಂದಿಗೆ ಸಂಪರ್ಕದಲ್ಲಿದ್ದಳು. ಮಗುವನ್ನು ಕೊಲ್ಲುವ ಮೊದಲಿನ‌ ಆಕೆಯ ಕರೆ ವಿವರಗಳನ್ನು ಪರಿಶೀಲಿಸುತ್ತಿದ್ದೇವೆ. ಅದೇ ರೀತಿ ಮಗುವಿನ ಸಾವಿನ ನಂತರ ಅವಳು ಯಾರಿಗೆ ಕರೆ ಮಾಡಿದಳು ಎಂನ ಮಾಹಿತಿಯನ್ನೂ ಕಲೆಹಾಕಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಹೋಟೆಲ್ ಸೋಲ್ ಬನಿಯನ್ ಗ್ರಾಂಡೆಯ 404 ಕೊಠಡಿಯಲ್ಲಿ ಸುಚನಾ ಸೇಠ್ ತನ್ನ ಮಗನನ್ನು ಕೊಚ್ಚಿ ಕೊಲೆ ಮಾಡಿದ್ದಾಳೆ. ಅಲ್ಲದೆ, ಕೋಣೆಯಲ್ಲಿ ಕೆಮ್ಮಿನ ಸಿರಪ್‌ನ ಎರಡು ಖಾಲಿ ಬಾಟಲಿಗಳು ಪತ್ತೆಯಾಗಿದ್ದು, ಆಕೆ ತನ್ನ ಮಗನನ್ನು ಕೊಲ್ಲೋ‌ ಮೊದಲು ಅಮಲೇರಿಸಲು ಯತ್ನಿಸಿದ್ದಾಳೆಂದು ಪೊಲೀಸ್‌ ಅಧಿಕಾರಿಗಳು ಶಂಕಿಸಿದ್ದಾರೆ.

Join Whatsapp