ಆಕ್ಸಿಜನ್ ಹಂಚಿಕೆಯಲ್ಲೂ ಮೋದಿ ಸರ್ಕಾರ ರಾಜ್ಯಕ್ಕೆ ಘನಘೋರ ಅನ್ಯಾಯ ಎಸಗುತ್ತಿದೆ : ಈಶ್ವರ್ ಖಂಡ್ರೆ ಆಕ್ರೋಶ

Prasthutha|

ಬೆಂಗಳೂರು : ಕರ್ನಾಟಕ ರಾಜ್ಯದ ಬಗ್ಗೆ ಪದೇ ಪದೇ ಅಸಡ್ಡೆ ತೋರುತ್ತಿರುವ ನರೇಂದ್ರಮೋದಿ ಸರ್ಕಾರ ವೈದ್ಯಕೀಯ ಆಕ್ಸಿಜೆನ್ ಹಂಚಿಕೆಯಲ್ಲೂ ರಾಜ್ಯಕ್ಕೆ ಘನಘೋರ ಅನ್ಯಾಯ ಎಸಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕರ್ನಾಟಕ ರಾಜ್ಯದ ಬಗ್ಗೆ ಪದೇ ಪದೇ ಅಸಡ್ಡೆ ತೋರುತ್ತಿರುವ ನರೇಂದ್ರಮೋದಿ ಸರ್ಕಾರ ವೈದ್ಯಕೀಯ ಆಕ್ಸಿಜೆನ್ ಹಂಚಿಕೆಯಲ್ಲೂ ರಾಜ್ಯಕ್ಕೆ ಘನಘೋರ ಅನ್ಯಾಯ ಎಸಗುತ್ತಿದೆ. ಕರ್ನಾಟಕದ ಜನರ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಏಕಷ್ಟು ಆಕ್ರೋಶ? ರಾಜ್ಯದ 25 ಸಂಸದರಿಗೆ ಜನರ ಜೀವ ಉಳಿಸುವ ಬದ್ಧತೆ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ರಾಜ್ಯದಿಂದ ಆಯ್ಕೆಯಾಗಿರುವ 25 ಸಂಸತ್ ಸದಸ್ಯರಿಗೆ ರಾಜ್ಯದ ಜನರ ಪ್ರಾಣ ಕಾಪಾಡುವ ಬದ್ಧತೆ ಇಲ್ಲವೇ. ಕೇಂದ್ರದ ಮೇಲೆ ಒತ್ತಡ ಹೇರಿ ಅಗತ್ಯಪ್ರಮಾಣದ ಆಕ್ಸಿಜನ್, ರೆಮ್ಡಿಸಿವೀರ್ ತರಿಸುವ ಶಕ್ತಿಯೂ ಇವರಿಗಿಲ್ಲವೇ? ಮತಕೊಟ್ಟ ಗೆಲ್ಲಿಸಿದ ರಾಜ್ಯದ ಜನರ ಪ್ರಾಣ ಇಷ್ಟು ನಿಕೃಷ್ಟವಾಯಿತೇ? ಇವರನ್ನು ಜನರಷ್ಟೇ ಅಲ್ಲ ದೇವರೂ ಕ್ಷಮಿಸುವುದಿಲ್ಲ ಎಂದು ಕಿಡಿಕಾರಿದ್ದಾರೆ.

Join Whatsapp