ನಮ್ಮ ದೇಶದ ಪರಿಸ್ಥಿತಿ ಉತ್ತಮವಾಗಿದೆಯೆನ್ನುತ್ತಾ ವಿಶ್ವಸಂಸ್ಥೆಯ ಕೋವಿಡ್ ನೆರವನ್ನು ನಿರಾಕರಿಸಿದ ಭಾರತ !

Prasthutha|

ಹೊಸದಿಲ್ಲಿ : ಕೋವಿಡ್ ಸೋಂಕಿನಿಂದ ತತ್ತರಿಸಿ ಹೋಗಿರುವ ಭಾರತದ ನೆರವಿಗೆ ಮಿತ್ರ ರಾಷ್ಟಗಳೆಲ್ಲವೂ ಕೈಜೋಡಿಸಿ ವೈದ್ಯಕೀಯ ಸಾಮಾಗ್ರಿಗಳನ್ನು ತುರಾತುರಿಯಲ್ಲಿ ರಫ್ತು ಮಾಡುತ್ತಿದೆ. ಅದೇ ರೀತಿ ಭಾರತದ ಪರಿಸ್ಥಿತಿಯನ್ನು ಮನಗಂಡು ವಿಸ್ವಸಂಸ್ಥೆಯು ಕೋವಿಡ್ ಸಂಬಂಧಿತ ಸಹಾಯವನ್ನು ನೀಡುವುದಾಗಿ ಭರವಸೆ ನೀಡಿತ್ತು, ಆದರೆ ವಿಶ್ವಸಂಸ್ಥೆಯ ಈ ನೆರವನ್ನು ಭಾರತ “ನಮ್ಮ ದೇಶದ ಪರಿಸ್ಥಿತಿ ಉತ್ತಮವಾಗಿದೆ” ಎನ್ನುತ್ತಾ ನಿರಾಕರಿಸಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯಾ ಗುಟೇರಸ್  ಹೇಳಿದ್ದಾರೆ.

- Advertisement -

   ನಮ್ಮ ಇಂಟಗ್ರೇಟೆಡ್ ಚೈನ್ ಸಪ್ಲೈ ಅಗತ್ಯವಿದ್ದರೆ ನೀಡುವುದಾಗಿ ಭರವಸೆಯನ್ನು ಭಾರತಕ್ಕೆ ನೀಡಿದ್ದೆವು, ಆದರೆ ಈ ಸಮಯ ನಮಗೆ ಈ ಸಹಾಯದ ಅಗತ್ಯವಿಲ್ಲ , ನಮ್ಮಲ್ಲಿ ಈಗಿನ ವ್ಯವಸ್ಥೆ ಉತ್ತಮವಾಗಿದೆ ಎಂದು ಹೇಳಿ ಬೇಡಿಕೆಯನ್ನು ತಿರಸ್ಕರಿಸಲಾಯಿತು , ಆದರೂ ನಮ್ಮ ಸಹಾಯದ ಭರವಸೆ ಇನ್ನೂ ಇದ್ದು ಅಗತ್ಯವಿದ್ದಲ್ಲಿ ಸಾದ್ಯವಿದ್ದಷ್ಟು ಸಹಾಯ ಮಾಡಲು ಸಿದ್ದರಿದ್ದೇವೆ ಎಂದು ವಿಶ್ವಸಂಸ್ಥೆಯ ಮುಖ್ಯಸ್ಥರ ಉಪ ವಕ್ತಾರ ಫರ್ಹಾನ್ ಹಖ್ ಹೇಳಿದ್ದಾರೆ.

Join Whatsapp