ದೆಹಲಿಯಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ, ಬಿಜೆಪಿಗರೇ ಎಲ್ಲಿದ್ದೀರಿ ? : ಆರೆಸ್ಸೆಸ್ ನಾಯಕನ ಟ್ವೀಟ್ ವೈರಲ್ !

Prasthutha|

ದೆಹಲಿಯ ಆರೆಸ್ಸೆಸ್ ರಾಜ್ಯ ಕಾರ್ಯನಿರ್ವಾಹಕ ಸದಸ್ಯನಾಗಿರುವ ರಾಜೀವ್ ತುಲಿಯವರು  ದೇಶದಲ್ಲಿ ಕೋವಿಡ್ ಪರಿಸ್ಥಿತಿ ಕೈಮೀರಿ ಹೋಗುತ್ತಿರುವುದರ ಕುರಿತು ಬಿಜೆಪಿಗರನ್ನು ತರಾಟೆಗೆ ತೆಗೆದುಕೊಂಡಿರುವ ಟ್ವೀಟ್ ವೈರಲ್ ಆಗಿದೆ. “ದೆಹಲಿಯ ನಾಲ್ಕು ಮೂಲೆಗಳಲ್ಲೂ ಬೆಂಕಿ ಹೊತ್ತಿ ಉರಿಯುತ್ತಿದೆ. ದೆಹಲಿಯವರು ಯಾರಾದರೂ ಬಿಜೆಪಿಗರನ್ನು ನೋಡಿದ್ದೀರಾ? ಬಿಜೆಪಿಯವರು ಎಲ್ಲಿದ್ದಾರೆ? ರಾಜ್ಯ ಘಟಕವನ್ನು ವಿಸರ್ಜಿಸಲಾಯಿತೇ? ಎಂದವರು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

ರಾಜೀವ್ ತುಲಿ ಆರೆಸ್ಸೆಸ್ಸಿನ ಮಾಜಿ ಪ್ರಚಾರಕ್ ಪ್ರಮುಖ್ ಕೂಡಾ ಆಗಿದ್ದಾರೆ. ಈ ಕುರಿತು ಪ್ರತಿಕ್ರಿಯೆಗಾಗಿ ದೆಹಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಆದೇಶ್ ಗುಪ್ತಾರನ್ನು ಮಾಧ್ಯಮದವರು ಸಂಪರ್ಕಿಸಿದಾಗ, ನನಗೆ ರಾಜೀವ್ ತುಲಿ ಯಾರೆಂದೇ ಗೊತ್ತಿಲ್ಲ ಎಂದುತ್ತರಿಸಿದ್ದಾರೆ ಎನ್ನಲಾಗಿದೆ.

- Advertisement -

ರಾಜೀವ್ ತುಲಿ ಈ ಹಿಂದೆ ಸುಶ್ಮಾ ಸ್ವರಾಜ್ ಅವರನ್ನೇ ಬಹಿರಂಗವಾಗಿ ಟೀಕಿಸಿ ಸುದ್ದಿಯಾಗಿದ್ದರು. ಅಂಬೇಡ್ಕರ್ ಅವರಿಗೆ ಆರೆಸ್ಸೆಸ್ ಜೊತೆಗೆ ಉತ್ತಮ ಸಂಬಂಧವಿತ್ತು ಎಂಬ ವಿವಾದಾತ್ಮಕ ಬರಹವನ್ನೂ ಬರೆದಿದ್ದರು. ಮದರ್ ತೆರೆಸಾರಿಗೆ ಕೊಟ್ಟ ಭಾರತ ರತ್ನವನ್ನು ಪುನರ್ ಪರಿಶೀಲಿಸಬೇಕೆಂದು ಕೂಡಾ ಆಗ್ರಹಿಸಿದ್ದರು. ಹೀಗೆ ವಿವಾದಗಳಿಂದಲೇ ಸದಾ ಸುದ್ದಿಯಲ್ಲಿರುವ ಓರ್ವ ವ್ಯಕ್ತಿಯಾಗಿದ್ದಾರೆ ರಾಜೀವ್ ತುಲಿ.

- Advertisement -