ಫೆಲೆಸ್ತೀನ್‌ ಮೇಲೆ ಇಸ್ರೇಲ್‌ ದಾಳಿ ಖಂಡಿಸಿ ಐರ್ಲ್ಯಾಂಡ್‌ ಸಂಸತ್ತಿನಲ್ಲಿ ವಿಶೇಷ ಗೊತ್ತುವಳಿ

Prasthutha|

ಡಬ್ಲಿನ್‌ : ಇಸ್ರೇಲಿ ಪಡೆಗಳು ಫೆಲೆಸ್ತೀನಿಯನ್ನರ ಭೂಮಿಯನ್ನು ಅಕ್ರಮವಾಗಿ ಆಕ್ರಮಿಸಿರುವುದರ ವಿರುದ್ಧ ಐರ್ಲ್ಯಾಂಡ್‌ ಸಂಸತ್ತು ವಿಶೇಷ ಗೊತ್ತುವಳಿ ಜಾರಿಗೊಳಿಸಿದೆ. ಪ್ರತಿಪಕ್ಷ ಸಿನ್‌ ಫೆನ್‌ ಪಾರ್ಟಿ ಬುಧವಾರ ಐರ್ಲಾಂಡ್‌ ಸಂಸತ್ತಿನಲ್ಲಿ ಗೊತ್ತುವಳಿ ಮಂಡಿಸಿತ್ತು. ಆಡಳಿತ ಹಾಗೂ ಪ್ರತಿಪಕ್ಷದ ಬೆಂಬಲಿಗರಿಂದ ಬೆಂಬಲ ದೊರಕಿದ ಹಿನ್ನೆಲೆಯಲ್ಲಿ, ಗೊತ್ತುವಳಿ ಮಂಜೂರಾಯಿತು.

- Advertisement -

ವಿಷಯಕ್ಕೆ ಸಂಬಂಧಿಸಿ ಇಸ್ರೇಲ್‌ ವಿರುದ್ಧ ಗೊತ್ತುವಳಿ ಮಂಡಿಸಿದ ಯುರೋಪಿನ ಮೊದಲ ದೇಶ ಐರ್ಲ್ಯಾಂಡ್‌ ಎಂದು ಗುರುತಿಸಲ್ಪಟ್ಟಿದೆ. ಈ ಗೊತ್ತುವಳಿ ಐರ್ಲ್ಯಾಂಡ್‌ ನಾದ್ಯಂತದ ಜನರ ಆಳವಾದ ಭಾವನೆಯ ಸ್ಪಷ್ಟ ಗುರುತಾಗಿದೆ ಎಂದು ಐರಿಷ್‌ ವಿದೇಶಾಂಗ ಸಚಿವ ಸಿಮೊನ್‌ ಕಾವೆನಿ ಹೇಳಿದ್ದಾರೆ.

ಇದು ನಾನು ಅಥವಾ ಈ ಸಂಸತ್ತಿನ ನಿಲುವು ಎಂದು ಸರಳವಾಗಿ ಹೇಳುವಂತಿಲ್ಲ. ಯುರೋಪಿಯನ್‌ ಒಕ್ಕೂಟದಲ್ಲಿ ಈ ರೀತಿ ಮಾಡಿದವರು ನಾವು ಮೊದಲಿಗರು. ಇದು ಇಸ್ರೇಲ್‌ ನ ಚಟುವಟಿಕೆಗಳು ಮತ್ತು ಅದರ ಪರಿಣಾಮಗಳ ಬಗ್ಗೆ ನಾವು ಹೊಂದಿರುವ ಅತ್ಯಂತ ಕಳವಳದ ಪ್ರತಿಬಿಂಬಿಸುತ್ತದೆ.  

Join Whatsapp