ಐಪಿಎಲ್ ಪುನಾರಂಭ ! ಬಾಕಿ ಉಳಿದಿದ್ದ ಪಂದ್ಯಾಟಗಳು UAE ಗೆ ಶಿಫ್ಟ್

Prasthutha|

ಕೋವಿಡ್ ಕಾರಣದಿಂದ ಅರ್ಧದಲ್ಲೇ ಮೊಟಕುಗೊಂಡಿದ್ದ ಐಪಿಎಲ್ ಪಂದ್ಯಾಟಗಳನ್ನು ಯುಎಇಯಲ್ಲಿ ನಡೆಸಲಾಗುವುದೆಂದು ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ANI ಸುಧ್ದಿಸಂಸ್ಥೆಗೆ ತಿಳಿಸಿದ್ದಾರೆ. ಐಪಿಎಲ್ ಆಟಗಾರರಿಗೂ ಕೋವಿಡ್ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಿಸಿಸಿಐ 14ನೇ ಆವೃತ್ತಿಯ ಐಪಿಎಲ್ ಪಂದ್ಯಗಳನ್ನು ಕಳೆದ ಎಪ್ರಿಲ್ ನಲ್ಲಿ ರದ್ದುಗೊಳಿಸಿತ್ತು.

- Advertisement -

ಇನ್ನುಳಿದ ಪಂದ್ಯಾಟಗಳನ್ನು ಯುಎಇ ಯಲ್ಲಿ ನಡೆಸುವ ನಿರ್ಧಾರವನ್ನು ಎಲ್ಲಾ ಸದಸ್ಯರು ಬಿಸಿಸಿಐ ವಿಶೇಷ ಸಾಮಾನ್ಯ ಸಭೆಯಲ್ಲಿ ಬೆಂಬಲಿಸಿದ್ದು , ಸರ್ವರೂ ಒಮ್ಮತದಿಂದ ಸಮ್ಮತಿಸಿದ್ದಾರೆ ಎಂದು ತಿಳಿದು ಬಂದಿದೆ. ಪ್ಲೇ ಆಫ್ ಹಾಗೂ ಒಟ್ಟು 31 ಪಂದ್ಯಗಳು ಬಾಕಿ ಉಳಿದಿದ್ದು ಸಪ್ಟೆಂಬರ್ 18ರ ವೇಳೆಯಲ್ಲಿ ಪಂದ್ಯಾಟ ಆರಂಭವಾಗಿ ಅಕ್ಟೋಬರ್ 9 ರಂದು ಮುಕ್ತಾಯ ಗೊಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

Join Whatsapp