IPL-2022 | ಕೆಕೆಆರ್ ಗೆಲುವಿಗೆ 162 ರನ್ ಗುರಿ ನೀಡಿದ ಮುಂಬೈ ಇಂಡಿಯನ್ಸ್

Prasthutha|

- Advertisement -

ಮುಂಬೈ: ಐಪಿಎಲ್’ನ 15ನೇ ಆವೃತ್ತಿಯಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿರುವ ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 162 ರನ್’ಗಳ ಸವಾಲಿನ ಗುರಿ ನೀಡಿದೆ‌.

ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್, ಮುಂಬೈ ತಂಡವನ್ನು ಬ್ಯಾಟಿಂಗ್’ಗೆ ಆಹ್ವಾನಿಸಿತ್ತು.
ನಾಯಕ ರೋಹಿತ್ ಶರ್ಮಾ 3 ಮತ್ತು ಇಶಾನ್ ಕಿಶನ್ 14 ರನ್ ಗಳಿಸಿ ನಿರ್ಗಮಿಸಿದರು.
ಡಿವಾಲ್ಡ್ ಬ್ರೇವಿಸ್ ಭರ್ಜರಿ ಹೊಡೆತಗಳ ಮೂಲಕ ವೇಗವಾಗಿ ರನ್ ಗಳಿಸಲು ಪ್ರಾರಂಭಿಸಿದರೂ, 29 ರನ್’ಗಳಿಸಿದ್ದ ವೇಳೆ ವರುಣ್ ಚಕ್ರವರ್ತಿ ಬೌಲಿಂಗ್’ನಲ್ಲಿ ಸ್ಟಂಪ್ ಔಟ್ ಗೆ ಬಲಿಯಾದರು.

- Advertisement -

ಸೂರ್ಯಕುಮಾರ್ ಅರ್ಧಶತಕ

ಗಾಯದಿಂದ ಚೇತರಿಸಿಕೊಂಡ ಬಳಿಕ ಮುಂಬೈ ಪರ ಮೊದಲ ಪಂದ್ಯವನ್ನಾಡಿದ ಸೂರ್ಯಕುಮಾರ್ ಯಾದವ್, ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು‌.
36 ಎಸೆತಗಳನ್ನು ಎದುರಿಸಿದ ಸೂರ್ಯಕುಮಾರ್, 2 ಸಿಕ್ಸರ್ ಮತ್ತು 5 ಬೌಂಡರಿಗಳ ನೆರವಿನಿಂದ 52 ರನ್ ಗಳಿಸಿ ನಿರ್ಗಮಿಸಿದರು‌. ತಿಲಕ್ ವರ್ಮಾ 38 ಮತ್ತು 5 ಎಸೆತಗಳಲ್ಲಿ 3 ಸಿಕ್ಸರ್ ಬಾರಿಸಿದ ಪೊಲಾರ್ಡ್ ತಂಡದ ಮೊತ್ತವನ್ನು 150 ರ ಗಡಿ ದಾಟಿಸಿದರು.

ಕೆಕೆಆರ್ ಪರ ಪ್ಯಾಟ್ ಕಮ್ಮಿನ್ಸ್ 2 ವಿಕೆಟ್, ಉಮೇಶ್ ಯಾದವ್ ಹಾಗೂ ವರುಣ್ ಚಕ್ರವರ್ತಿ ತಲಾ 1 ವಿಕೆಟ್ ಪಡೆದರು.

Join Whatsapp