ಐಪಿಎಲ್ 2022 | ಲಖನೌ ಗೆಲುವಿಗೆ ಕಠಿಣ ಗುರಿ ನೀಡಿದ ಚೆನ್ನೈ ಸೂಪರ್ ಕಿಂಗ್ಸ್

Prasthutha|

ಮುಂಬೈ: ಲಖನೌ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಚೆನ್ನೈ ಬ್ಯಾಟರ್’ಗಳು ರಾಹುಲ್ ಪಡೆ ಗೆಲುವಿಗೆ 211 ರನ್’ಗಳ ಕಠಿಣ ಗುರಿ ನೀಡಿದೆ.
ಬ್ರೆಬೋರ್ನ್ ಮೈದಾನದಲ್ಲಿ ಟಾಸ್ ಸೋತು ಬ್ಯಾಟಿಂಗ್ ಅವಕಾಶ ಪಡೆದ ಚೆನ್ನೈ ಸೂಪರ್ ಕಿಂಗ್ಸ್, ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಮುಂದಾಗಿತ್ತು. ಆರಂಭಿಕನಾಗಿ ಭಡ್ತಿ ಪಡೆದಿದ್ದ ರಾಬಿನ್ ಉತ್ತಪ್ಪ 27 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 8 ಬೌಂಡರಿಗಳ ನೆರವಿನಿಂದ ಆಕರ್ಷಕ ಅರ್ಧಶತಕ ದಾಖಲಿಸಿ ರವಿ ಬಿಷ್ಣೋಯ್ ಬೌಲಿಂಗ್ ನಲ್ಲಿ ಎಲ್ ಬಿ ಡಬ್ಲ್ಯೂ ಆಗಿ ನಿರ್ಗಮಿಸಿದರು.
ಮತ್ತೊಂದೆಡೆ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ನಿರ್ಗಮಿಸಿದ್ದ ಋತುರಾಜ್ ಗಾಯಕ್ವಾಡ್, ಎರಡನೇ ಪಂದ್ಯದಲ್ಲೂ 1 ರನ್ ಗಳಿಸಿದ್ದ ವೇಳೆ ರನೌಟ್’ಗೆ ಬಲಿಯಾದರು.
ಮೂರನೇ ಕ್ರಮಾಂಕದಲ್ಲಿ ಬಂದ ಮೋಯಿನ್ ಅಲಿ 35 ರನ್ ಗಳಿಸಿದರೆ, ಶಿವಂ ದುಬೆ 1 ರನ್’ ಅಂತರದಲ್ಲಿ ಅರ್ಧಶತಕ ವಂಚಿತರಾದರು.
ಕೊನೆಯಲ್ಲಿ ಕಪ್ತಾನ ರವೀಂದ್ರ ಜಡೇಜಾ [17 ರನ್] ಮತ್ತು ಎಂಎಸ್ ಧೋನಿ [16 ರನ್], ಬಿರುಸಿನ ಬ್ಯಾಟಿಂಗ್ ನಡೆಸಿದ ಪರಿಣಾಮ ತಂಡದ ಮೊತ್ತ 200ರ ಗಡಿ ದಾಟಿತು.
ಅಂತಿಮವಾಗಿ ಸಿಎಎಸ್ ಕೆ 7 ವಿಕೆಟ್ ನಷ್ಟದಲ್ಲಿ 210 ರನ್’ಗಳಿಸಿದ್ದು, ಲಖನೌ ಗೆಲುವಿಗೆ ಪ್ರತಿ ಓವರ್‌ಗಳಲ್ಲಿ 10ಕ್ಕೂ ಹೆಚ್ಚು ರನ್ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿದೆ.
ಲಖನೌ ಪರ ಆವೇಶ್ ಖಾನ್, ಆಂಡ್ರ್ಯೂ ಟೈ ಹಾಗೂ ರವಿ ಬಿಷ್ಣೋಯ್ ತಲಾ 2 ವಿಕೆಟ್ ಪಡೆದರು.
ಟೂರ್ನಿಯ ಮೊದಲ ಪಂದ್ಯದಲ್ಲಿ ಉಭಯ ತಂಡಗಳು ಸೋಲಿನ‌ ಆರಂಭ ಪಡೆದಿದ್ದು, ಚೆನ್ನೈ ಇಂದಿನ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆಯುವ ನಿರೀಕ್ಷೆ ಇದೆ

Join Whatsapp