ಆರ್ಥಿಕ ಸಂಕಷ್ಟ: ಶ್ರೀಲಂಕಾದಲ್ಲಿ ಡೀಸೆಲ್ ಮಾರಾಟ ಸ್ಥಗಿತ !

Prasthutha|

ಕೊಲಂಬೊ: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾದಲ್ಲಿ ಈಗ ಡೀಸೆಲ್ ಖರೀದಿಗೂ ವಿದೇಶಿ ವಿನಿಮಯದ ಕೊರತೆ ಕಾಡುತ್ತಿದೆ. ಹೀಗಾಗಿ, ದೇಶದಾದ್ಯಂತ ಗುರುವಾರ ಡೀಸೆಲ್ ಮಾರಾಟ ಸ್ಥಗಿತಗೊಂಡಿದ್ದು ಶ್ರೀಲಂಕಾ ಜನರ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ.

- Advertisement -

ಡೀಸೆಲ್ ಬಳಕೆಯು ಬಸ್, ವಾಣಿಜ್ಯ ವಾಹನಗಳಿಗೆ ಮುಖ್ಯ ಇಂಧನ. ಆದರೆ, ದೇಶದಾದ್ಯಂತ ಬಂಕ್‌ಗಳಲ್ಲಿ ಡೀಸೆಲ್ ಲಭ್ಯವಿಲ್ಲ. ಪೆಟ್ರೋಲ್ ಮಾರಾಟ ನಡೆಯುತ್ತಿದೆ. ಆದರೆ, ಕಡಿಮೆ ಪೂರೈಕೆ ಇದೆ. ಹೀಗಾಗಿ, ವಾಹನ ಚಾಲಕರು ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ.

ಇನ್ನು ಶ್ರೀಲಂಕಾ ತನ್ನ 51 ಬಿಲಿಯನ್ ಡಾಲರ್ ವಿದೇಶಿ ಸಾಲವನ್ನು ತೀರಿಸಲು ಅಗತ್ಯವಾದ ವಿದೇಶಿ ಕರೆನ್ಸಿಯನ್ನು ಉಳಿಸುವ ಪ್ರಯತ್ನದಲ್ಲಿ ಮಾರ್ಚ್ 2020ರಲ್ಲಿ ವಿಶಾಲ ಆಮದು ನಿಷೇಧವನ್ನು ವಿಧಿಸಿತು. ಆದರೆ, ಇದು ಅಗತ್ಯ ವಸ್ತುಗಳ ವ್ಯಾಪಕ ಕೊರತೆ ಮತ್ತು ತೀವ್ರ ಬೆಲೆ ಏರಿಕೆಗೆ ಕಾರಣವಾಗಿದೆ. ಇತ್ತ, ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ ನೆರವಿಗೆ ಪ್ರಯತ್ನಿಸುತ್ತಿರುವುದಾಗಿ ಸರ್ಕಾರ ಹೇಳಿದೆ.

Join Whatsapp