ಅಂತಧರ್ಮೀಯ ಮದುವೆಯಾಗಿದ್ದ ಯುವತಿ ಸಾವು: ಆಗ್ರಾದಲ್ಲಿ ಘರ್ಷಣೆ, ಉದ್ವಿಗ್ನ ಪರಿಸ್ಥಿತಿ

Prasthutha|

ಗಾಝಿಯಾಬಾದ್ : ಅಂತರ್ ಧರ್ಮೀಯ ವಿವಾಹವಾಗಿದ್ದ 22 ವರ್ಷ ಪ್ರಾಯದ ಯುವತಿಯ ನಿಗೂಢ ಸಾವಿನ ಹಿನ್ನೆಲೆಯಲ್ಲಿ ಆಗ್ರಾದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

- Advertisement -


ಬಿಜೆಪಿ ಮತ್ತು ಸಂಘಪರಿವಾರ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ನಮ್ಮ ಮೇಲೆ ಕಲ್ಲು ತೂರಾಟ ನಡೆಸಿ ಗುಂಡು ಹಾರಿಸಿದರು ಮತ್ತು ಸಮುದಾಯದ ವಿರುದ್ಧ ಘೋಷಣೆಗಳನ್ನು ಕೂಗಿದರು ಎಂದು ಸ್ಥಳೀಯ ಮೂಲಗಳು ತಿಳಿಸಿವೆ.ನಗರದ ಶಹಗಂಜ್ ಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಹೆಚ್ಚಿನ ಪೊಲೀಸ್ ಪಡೆಯನ್ನು ನಿಯೋಜಿಸಿದ್ದಾರೆ.


ಒಂದು ವರ್ಷದ ಹಿಂದೆ, ವರ್ಷಾ ಎಂಬಾಕೆಯನ್ನು ಆಟೋಮೊಬೈಲ್ ಗ್ಯಾರೇಜ್ ನಡೆಸುತ್ತಿರುವ ಫಾಹಿಮ್ (25) ಎಂಬವರು ವಿವಾಹವಾಗಿದ್ದರು. ನವೆಂಬರ್ 12 ರಂದು, ವರ್ಷಾ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಫಾಹಿಮ್ ಕುಟುಂಬ ಹೇಳಿದೆ. ಈ ಘಟನೆ ಕೋಮು ಸೂಕ್ಷ್ಮ ಪ್ರದೇಶವಾದ ಆಗ್ರಾದಲ್ಲಿ ಉದ್ವಿಗ್ನತೆಗೆ ಕಾರಣವಾಯಿತು.ತನ್ನ ಮಗಳು ಅತ್ತೆ-ಮಾವಂದಿರ ಮನೆಯಲ್ಲಿ ವಾಸಿಸದೆ ಬೇರೆಯಾಗಿ ವಾಸಿಸುತ್ತಿದ್ದಳು. ಅವಳ ಸಾವಿಗೆ ಕಾರಣವೇನು ಎಂದು ತಿಳಿದಿಲ್ಲ. ಅವರು (ಫಾಹಿಮ್ ನ ಕುಟುಂಬ) ಅವಳನ್ನು ನೋಡಿಕೊಳ್ಳಲು ಸಾಧ್ಯವಾಗದಿದ್ದರೆ, ಅವರು ಅವಳನ್ನು ನಮ್ಮ ಬಳಿಗೆ ಕಳುಹಿಸಬಹುದಿತ್ತು” ಎಂದು ಸಂತ್ರಸ್ತೆಯ ತಾಯಿ ವರದಿಗಾರರಿಗೆ ಅವರು ಹೇಳಿದಳು.

- Advertisement -


ತನ್ನ ಸಹೋದರಿ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲ. ಇದರ ಹಿಂದೆ ಸಂಶಯವಿದೆ ಎಂದು ಸಂತ್ರಸ್ತೆಯ ಸಹೋದರ ಹೇಳಿದರು. ಬಿಜೆಪಿ ಯುವ ಮೋರ್ಚಾದ ಕಾರ್ಯದರ್ಶಿ ಗೌರವ್ ರಾಜಾವತ್, ಜಿಲ್ಲಾ ಅಧ್ಯಕ್ಷ ಶೈಲು ಪಂಡಿತ್ ಅವರೊಂದಿಗೆ ಸ್ಥಳಕ್ಕೆ ಆಗಮಿಸಿ, ಒಂದು ಸಮುದಾಯದ ವಿರುದ್ಧ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪೊಲೀಸರ ಸಮ್ಮುಖದಲ್ಲಿಯೂ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಲಾಗಿದೆ.


ಅಲ್ಪಸಂಖ್ಯಾತ ಸಮುದಾಯದ ಕೆಲವು ಅಂಗಡಿಗಳನ್ನು ಸಹ ಈ ಪ್ರದೇಶದಲ್ಲಿ ಗುರಿಯಾಗಿಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ನಂತರ, ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರು ಶಹಗಂಜ್ ಪೊಲೀಸ್ ಠಾಣೆಗೆ ಘೇರಾವ್ ಹಾಕಿದರು, ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.


“ಬಿಜೆಪಿ ಯುವ ಮೋರ್ಚಾ ನಾಯಕರು ಮುಸ್ಲಿಮರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಅಂಗಡಿಗಳನ್ನು ಮುಚ್ಚುವಂತೆ ಬೆದರಿಕೆ ಹಾಕಿದರು. ಮುಸ್ಲಿಮರು ನಡೆಸುತ್ತಿದ್ದ ಮೂರು ಅಂಗಡಿಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಪಾತ್ರೆ ಅಂಗಡಿ ಇಟ್ಟುಕೊಂಡಿರುವ ಅಲಿ ಹೈದರ್ ಎಂಬವರು ಪತ್ರಕರ್ತರಿಗೆ ತಿಳಿಸಿದರು.ಸ್ಥಳದಲ್ಲಿ ಈಗಲೂ ಪ್ರಕ್ಷುಬ್ಧ ವಾತಾವರಣವಿದ್ದು, ಹೆಚ್ಚಿನ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.



Join Whatsapp