ಎಲ್ಲವನ್ನೂ ಕೋಮುದೃಷ್ಟಿಯಿಂದ ನೋಡುವ ಬಿಜೆಪಿ : ಇಮ್ರಾನ್ ಪರ್ತಾಪ್ ಗರಿ

Prasthutha|

ಚಂಡೀಗಡ: ಎಲ್ಲದರಲ್ಲೂ ಕೋಮು ದೃಷ್ಟಿಕೋನದಿಂದ ನೋಡುವ ಬಿಜೆಪಿಯು ರಾಜಕೀಯವನ್ನೇ ಕೋಮು ಮಯವಾಗಿಸಿದೆ ಎಂದು ಎಐಸಿಸಿ ಅಲ್ಪಸಂಖ್ಯಾಕರ ವಿಭಾಗದ ಅಧ್ಯಕ್ಷ ಇಮ್ರಾನ್ ಪರ್ತಾಪ್ ಗರಿ ಅವರು ಬಿಜೆಪಿಯನ್ನು ಟೀಕಿಸಿದ್ದಾರೆ.

- Advertisement -


ಸಮಾಜ ಮತ್ತು ರಾಜಕೀಯ ಹಿಡಿತವನ್ನು ಕೋಮು ವ್ಯಾಖ್ಯಾನದಿಂದಲೇ ಮಾಡುವುದು ಬಿಜೆಪಿಯ ಉದ್ದೇಶವಾಗಿದೆ. ಮುಂದಿನ ತಿಂಗಳು ನಡೆಯುವ ಚಂಡೀಗಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ಎಂಬ ಸಮಾವೇಶವನ್ನು ಉದ್ದೇಶಿಸಿ ಅವರು ಮಣಿಮಾಜ್ರಾದಲ್ಲಿ ಮಾತನಾಡಿದರು.


ಮಾಜಿ ಕೇಂದ್ರ ಮಂತ್ರಿ ಮತ್ತು ಎಐಸಿಸಿ ಖಜಾಂಚಿ ಪವನ್ ಕುಮಾರ್ ಬನ್ಸಾಲ್ ಮಾತನಾಡಿ, ಬಿಜೆಪಿಗೆ ಯಾವುದೇ ಆರ್ಥಿಕ ನೀತಿ ಇಲ್ಲ. ಬಿಜೆಪಿಯ ತಪ್ಪು ನೀತಿಯಿಂದಾಗಿ ದೇಶದ ಜನರು ನಾನಾ ಸಂಕಷ್ಟಗಳಿಗೆ ಸಿಲುಕಿದ್ದಾರೆ ಎಂದು ಹೇಳಿದರು. ಬಿಜೆಪಿಯು ಚಂಡೀಗಡ ಮಹಾನಗರ ಪಾಲಿಕೆಯ ಬೊಕ್ಕಸವನ್ನು ಪೂರ್ಣ ಬರಿದಾಗಿಸಿದೆ. ಕಳೆದ ಬಾರಿಯ ಚುನಾವಣೆ ಕಾಲದಲ್ಲಿ ನೀಡಿದ ಯಾವುದೇ ಭರವಸೆಯನ್ನು ಈಡೇರಿಸಿಲ್ಲ ಎಂದು ಕಾಂಗ್ರೆಸ್ ನಗರ ಮುಖ್ಯಸ್ಥ ಸುಭಾಷ್ ಚಾವ್ಲಾ ಹೇಳಿದರು.

Join Whatsapp