ಲಸಿಕಾ ಬೂಸ್ಟರ್ ಎನ್ನುವುದೇ ಒಂದು “ಹಗರಣ” : WHO ಮುಖ್ಯಸ್ಥ

Prasthutha|

ಜಿನೆವಾ: ಲಸಿಕಾ ಬೂಸ್ಟರ್ ಹೆಸರಿನಲ್ಲಿ ನಡೆಯುತ್ತಿರುವ ಲಸಿಕೆಯ ಅಸಮಾನ ಹಂಚಿಕೆಯು ಒಂದು ಹಗರಣ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಗೆಬ್ರೆಯೆಸಸ್ ಹೇಳಿದ್ದಾರೆ. ಬಡ ರಾಷ್ಟ್ರಗಳ ನಾಗರಿಕರು ಮೊದಲ ಡೋಸ್ ಲಸಿಕೆ ಪಡೆಯಲು ಕಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲಿ ಶ್ರೀಮಂತ ರಾಷ್ಟ್ರಗಳು ಬೂಸ್ಟರ್ ಲಸಿಕೆಯ ಹೆಸರಲ್ಲಿ ಲಸಿಕೆ ಹಂಚುವುದು ದೊಡ್ಡ ಹಗರಣ , ಇದು ಕೊನೆಗೊಳ್ಳಬೇಕು ಎಂದು ಟೆಡ್ರೋಸ್ ಹೇಳಿದ್ದಾರೆ.

- Advertisement -


ಹಲವು ದೇಶಗಳು ಬೂಸ್ಟರ್ ಅಭಿಯಾನ ನಡೆಸುವ ಸಂದರ್ಭದಲ್ಲಿ ಕೆಲವು ರಾಷ್ಟ್ರಗಳು ಇನ್ನೂ ಪ್ರಾಥಮಿಕ ಹಂತದ ಲಸಿಕಾ ಕಾರ್ಯಕ್ರಮಕ್ಕೆ ಹಣೆಗಾಡುತ್ತಿವೆ. ಬಡ ದೇಶಗಳು ಲಸಿಕೆಗಾಗಿ ಇನ್ನೂ ಕಾಯುತ್ತಿವೆ, ಇದು ಇಲ್ಲಿಗೇ ನಿಲ್ಲಬೇಕು ಎಂದು ಅವರು ಅಂತಾರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿದ್ದಾರೆ. ಅಲ್ಲದೇ ಲಸಿಕೆಯ ವಿತರಣೆಯು ಆಫ್ರಿಕಾ ಖಂಡವನ್ನು ತೀವ್ರವಾಗಿ ಕಾಡಿದೆ, ಅಲ್ಲಿ ಕೇವಲ ಶೇ6ರಷ್ಟು ಮಂದಿ ಮಾತ್ರ ಲಸಿಕೆ ಪಡೆದುಕೊಂಡಿದ್ದಾರೆ ಎಂದರು.


ಇನ್ನು ಆರೋಗ್ಯವಂತ ವಯಸ್ಕರಿಗೂ ಬೂಸ್ಟರ್ ಗಳನ್ನು ನೀಡುವುದರ ಬಗ್ಗೆ ಟೀಕಿಸಿರುವ ಗೆಬ್ರೆಯೆಸಸ್ ‘ಆರೋಗ್ಯವಂತ ವಯಸ್ಕರಿಗೆ ಬೂಸ್ಟರ್ ಗಳನ್ನು ನೀಡುವುದರಲ್ಲಿ ಅಥವಾ ಮಕ್ಕಳಿಗೆ ಲಸಿಕೆ ಹಾಕುವುದರಲ್ಲಿ ಅರ್ಥವೇ ಇಲ್ಲ ಎಂದಿದ್ದಾರೆ. ಆರೋಗ್ಯ ಕಾರ್ಯಕರ್ತರು, ವೃದ್ಧರು ಮತ್ತು ಪ್ರಪಂಚದಾದ್ಯಂತ ಸಂಕಷ್ಟದಲ್ಲಿರುವ ಹಲವು ಗುಂಪುಗಳಿವೆ. ಅವರು ಲಸಿಕೆಗಾಗಿ ಇನ್ನೂ ಕಾಯುತ್ತಿದ್ದಾರೆ,’ ಎಂದು ಹೇಳಿದ್ದಾರೆ.

Join Whatsapp