ಪ್ರವಾದಿವರ್ಯರನ್ನು ಅವಮಾನಿಸಿದರೆ ಎಲ್ಲಾ ಮುಸ್ಲಿಮರನ್ನು ಅವಮಾನಿಸಿದಂತೆ: ಇರಾನ್ ಅಧ್ಯಕ್ಷ ರೂಹಾನಿ

ಟೆಹ್ರಾನ್: ಇಸ್ಲಾಮನ್ನು ಫ್ರಾನ್ಸ್ ಉಪಚರಿತ್ತಿರುವ ರೀತಿಯನ್ನು ಟೀಕಿಸಿರುವ ಇರಾನ್ ಅಧ್ಯಕ್ಷ ಹಸನ್ ರೂಹಾನಿ, ಪ್ರವಾದಿ ಮುಹಮ್ಮದ್ ರನ್ನು ವಿಡಂಬಿಸುವ ವ್ಯಂಗ್ಯ ಚಿತ್ರಗಳಿಗೆ ಪಾಶ್ಚಿಮಾತ್ಯ ಬೆಂಬಲವು ಅನೈತಿಕ ಮತ್ತು ಮುಸ್ಲಿಮರಿಗೆ ಅವಮಾನ ಎಂದಿದ್ದಾರೆ.

ಸ್ವಾತಂತ್ರ್ಯವು ಮೌಲ್ಯಗಳು ಹಾಗೂ ನೀತಿಯನ್ನು ಪರಿಗಣಿಸುವುದರ ಜೊತೆಗಿರಬೇಕು ಎಂದು ಅಧ್ಯಕ್ಷರು ತಿಳಿಸಿದರು.

- Advertisement -

“ಎಲ್ಲಾ ಮುಸ್ಲಿಮರು ಮತ್ತು ಸ್ವಾತಂತ್ರ್ಯವನ್ನು ಬಯಸುವ ಜಗತ್ತಿನ ಎಲ್ಲಾ ಜನರು ಇಸ್ಲಾಮ್ ನ ಪ್ರವಾದಿವರ್ಯರನ್ನು ಪ್ರೀತಿಸುತ್ತಾರೆಂಬುದನ್ನು ಪಾಶ್ಚಿಮಾತ್ಯರು ಅರ್ಥೈಸಿಕೊಳ್ಳಬೇಕು” ಎಂದು ರೂಹಾನಿ ಹೇಳಿದರು.

“ಪ್ರವಾದಿವರ್ಯರಿಗೆ ಮಾಡುವ ಅವಮಾನ ಎಲ್ಲಾ ಮುಸ್ಲಿಮರಿಗೆ ಮಾಡುವ ಅವಮಾನ. ಪ್ರವಾದಿಯನ್ನು ಅವಮಾನಿಸುವುದೆಂದರೆ ಎಲ್ಲಾ ಪ್ರವಾದಿಗಳನ್ನು, ಮಾನವ ಮೌಲ್ಯಗಳನ್ನು ಅವಮಾನಿಸಿದಂತೆ.  ಅದು ನೈತಿಕತೆಯನ್ನು ಕುಗ್ಗಿಸುತ್ತದೆ” ಎಂದು ಅವರು ಹೇಳಿದರು.

- Advertisement -