ಫರಂಗಿಪೇಟೆಯಲ್ಲಿ ಯುವಕನ ಕೊಲೆ ಯತ್ನ

Prasthutha|

ಮಂಗಳೂರು: ಸ್ಟುಡಿಯೊವೊಂದರ ಮಾಲೀಕರೊಬ್ಬರ ಮೇಲೆ ದುಷ್ಕರ್ಮಿಗಳ ತಂಡವೊಂದು ಮಾರಕಾಯುಧಗಳಿಂದ ದಾಳಿ ನಡೆಸಿ ಕೊಲೆಗೆ ಪ್ರಯತ್ನಿಸಿರುವ ಘಟನೆ ಫರಂಗಿಪೇಟೆಯಲ್ಲಿ ವರದಿಯಾಗಿದೆ.

- Advertisement -

ಫರಂಗಿಪೇಟೆಯ ತ್ರಿಷಾ ಸ್ಟುಡಿಯೋದ ಮಾಲೀಕ, ಛಾಯಾಚಿತ್ರಗ್ರಾಹಕ ದಿನೇಶ್ ಶೆಟ್ಟಿ ಅವರ ಮೇಲೆ ತಲವಾರಿನಿಂದ ದಾಳಿ ನಡೆಸಲಾಗಿದೆ. ದಿನೇಶ್ ಸ್ಟುಡಿಯೊದಲ್ಲಿರುವ ವೇಳೆ ಇಂದು ರಾತ್ರಿ ಈ ದಾಳಿ ನಡೆದಿದೆ.

ದಾಳಿ ಮಾಡಿದ ವ್ಯಕ್ತಿಗಳು ಮತ್ತು ದಾಳಿಯ ಹಿಂದಿನ ಕಾರಣ ಇನ್ನಷ್ಟೇ ಬಹಿರಂಗವಾಗಬೇಕಾಗಿದೆ.

Join Whatsapp