‘ಮೋದಿ, ನಿತೀಶ್ ಕುಮಾರ್ ನಮ್ಮ ಕುಟುಂಬದ ಬಗ್ಗೆ ಮಾತನಾಡುತ್ತಾರೆ, ಉದ್ಯೋಗದ ಬಗ್ಗೆ ಮಾತನಾಡಲಾರರು’ – ರಾಹುಲ್ ಗಾಂಧಿ

ತನ್ನ ಚುನಾವಣಾ ರ್ಯಾಲಿಯಲ್ಲಿ ಪ್ರಧಾನ ಮಂತ್ರಿಗಳು ನಿರುದ್ಯೋಗದ ಕುರಿತು ಮಾತನಾಡುವುದಿಲ್ಲ ಎನ್ನುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ.

ಬಿಹಾರದ ದರ್ಭಾಂಗದಲ್ಲಿ ನಡೆದ ರ್ಯಾಲಿಯೊಂದರಲ್ಲಿ ಮಾತನಾಡುತ್ತಾ ಕಾಂಗ್ರೆಸ್ ನ ಮಾಜಿ ಅಧ್ಯಕ್ಷರು, “ನಿತೀಶ್ ಕುಮಾರ್ ತೇಜಸ್ವಿ ಕುಟುಂಬದ ಕುರಿತು ಮಾತನಾಡುತ್ತಾರೆ. ನರೇಂದ್ರ ಮೋದಿ ನನ್ನ ಕುಟುಂಬದ ಕುರಿತು ಮಾತನಾಡುತ್ತಾರೆ. ಇಬ್ಬರೂ ರಾಜ್ಯದಲ್ಲಿರುವ ನಿರುದ್ಯೋಗ ಮತ್ತು ಬಡತನದ ಬಗ್ಗೆ ಮಾತನಾಡುವುದಿಲ್ಲ” ಎಂದರು.

- Advertisement -

ಪಶ್ಚಿಮ ಚಂಪರಣ್ ಜಿಲ್ಲೆಯಲ್ಲಿ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡುತ್ತಾ ಗಾಂಧಿ, ಪಂಜಾಬ್ ನಲ್ಲಿ ದಸರಾದ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳ ಪ್ರತಿಕೃತಿಗೆ ಬೆಂಕಿಯಿಡುವುದನ್ನು ಕಾಣುವಾಗ ನೋವಾಗಿತ್ತು. ಯುವಕರು ಮತ್ತು ರೈತರ ಆಕ್ರೋಶವು ಅದರಲ್ಲಿ ಪ್ರತಿಫಲಿಸುತ್ತದೆ ಎಂದು ಹೇಳಿದ್ದಾರೆ.

“ಪ್ರಧಾನ ಮಂತ್ರಿಯವರು ಬಿಹಾರದ ಮುಖ್ಯಮಂತ್ರಿಗಳ ಜೊತೆಗೆ ಇತರ ದೇಶಗಳ ಬಗ್ಗೆ ಭಾಷಣ ಮಾಡುತ್ತಾರೆ. ಆದರೆ ನಮ್ಮ ದೇಶ ಎದುರಿಸುತ್ತಿರುವ ನಿರುದ್ಯೋಗದ ಕುರಿತು ಮಾತನಾಡುತ್ತಿಲ್ಲ ಎಂದು ಪಂಜಾಬ್, ಬಿಹಾರ ಮತ್ತು ಉತ್ತರ ಪ್ರದೇಶದ ಯುವಕರು ಆಕ್ರೋಶಗೊಂಡಿದ್ದಾರೆ” ಎಂದು ಅವರು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಮೋದಿ 2 ಕೋಟಿ ಉದ್ಯೋಗಗಳನ್ನು ನೀಡುವುದಾಗಿ ತನ್ನ ಚುನಾವಣಾ ಭಾಷಣಗಳಲ್ಲಿ ಉಲ್ಲೇಖಿಸುವುದಿಲ್ಲ ಎಂದು ಅವರು ಹೇಳಿದರು.

“ಅವರು ಸುಳ್ಳು ಹೇಳಿದ್ದರೆಂದು ಬಿಹಾರ ಜನತೆ ಅರ್ಥೈಸಿದ್ದಾರೆ. ಪ್ರಧಾನ ಮಂತ್ರಿ ಇಂದು ಬಂದು ಯುವಕರಿಗೆ 2 ಕೋಟಿ ಉದ್ಯೋಗಗಳನ್ನು ಭರವಸೆ ನೀಡಿದರೆ, ಬಹುಶ: ಪ್ರೇಕ್ಷಕರು  ಅವರನ್ನು ಸುಳ್ಳು ಹೇಳಿದಿರೆಂದು ಓಡಿಸಬಹುದು” ಎಂದು ರಾಹುಲ್ ಗಾಂಧಿ ಹೇಳಿದರು.

- Advertisement -