ಯುಎಇ ಯಲ್ಲಿ ನೂತನ ಸೈಬರ್ ಅಪರಾಧ ಕಾನೂನು ಜಾರಿ: ಸಾರ್ವಜನಿಕ ಸ್ಥಳದಲ್ಲಿ ಇತರರ ಪೋಟೋ ಕ್ಲಿಕ್ಕಿಸುವುದು ಶಿಕ್ಷಾರ್ಹ ಅಪರಾಧ

Prasthutha|

ದುಬೈ: ಯುಎಇ ಯಲ್ಲಿ ಇನ್ನು ಮುಂದಕ್ಕೆ ಸಾರ್ವಜನಿಕ ಸ್ಥಳದಲ್ಲಿ ಅನುಮತಿಯಿಲ್ಲದೆ ಇತರರ ಪೋಟೋ ಕ್ಲಿಕ್ಕಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ತಿದ್ದುಪಡಿ ಮಾಡಲಾದ ನೂತನ ಸೈಬರ್ ಅಪರಾಧ ಕಾನೂನಿನ ಪ್ರಕಾರ ಕನಿಷ್ಠ ಆರು ತಿಂಗಳು ಜೈಲು ಅಥವಾ 1.5 ಲಕ್ಷ ದಿರ್ಹಮ್ ನಿಂದ 5 ಲಕ್ಷ ದಿರ್ಹಮ್ ವರೆಗೆ ದಂಡ ಅಥವಾ ಈ ಎರಡನ್ನೂ ವಿಧಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

- Advertisement -

ಯುಎಇಯಲ್ಲಿನ ತಿದ್ದುಪಡಿಯಾದ ಸೈಬರ್ ಅಪರಾಧ ಕಾನೂನು, ಬೆಳೆಯುತ್ತಿರುವ ಡಿಜಿಟಲ್ ಯುಗದಲ್ಲಿ ನಾಗರಿಕರು ಮತ್ತು ಸ್ಥಳೀಯ ನಿವಾಸಿಗಳಿಗೆ ಹೆಚ್ಚಿನ ರಕ್ಷಣೆಯನ್ನು ಒದಗಿಸುತ್ತದೆ.

ಜನವರಿ 2, 2022 ರಿಂದ ಜಾರಿಗೆ ಬರಲಿರುವ ಈ ಕಾನೂನು ಬ್ಯಾಂಕ್, ಮಾಧ್ಯಮ, ಆರೋಗ್ಯ ಮತ್ತು ವಿಜ್ಞಾನ ಕ್ಷೇತ್ರಗಳ ಡೇಟಾ ವ್ಯವಸ್ಥೆಗಳಿಗೆ ಹಾನಿಯನ್ನುಂಟುಮಾಡುವಂತಹ ಕೆಲವು ಅಪರಾಧಗಳಲ್ಲಿ ಕಠಿಣವಾದ ದಂಡವನ್ನು ವಿಧಿಸುತ್ತದೆ.



Join Whatsapp