ಇಂಡೋನೇಷ್ಯಾದಲ್ಲಿ ಭೂಕಂಪ: ಮೃತರ ಸಂಖ್ಯೆ 318ಕ್ಕೆ ಏರಿಕೆ

Prasthutha|

- Advertisement -

ಜಕಾರ್ತ: ಪಶ್ಚಿಮ ಜಾವಾ ಪ್ರಾಂತ್ಯದಲ್ಲಿ ಸಂಭವಿಸಿದ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 318 ಕ್ಕೆ ಏರಿದೆ.

ಅಲ್ಲದೆ, 14 ಮಂದಿ ನಾಪತ್ತೆಯಾಗಿದ್ದಾರೆ ಎಂದು ದೇಶದ ವಿಪತ್ತು ನಿರ್ವಹಣಾ ಏಜೆನ್ಸಿಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

- Advertisement -

ಭೂಕಂಪದಿಂದ ಸಿಯಾಂಜೂರ್ ಜಿಲ್ಲೆಯಲ್ಲಿ 7,729 ಜನರು ಗಾಯಗೊಂಡಿದ್ದು, 58,049 ಮನೆಗಳು ನಾಶವಾಗಿವೆ. 73,693 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಹೇಳಿದರು. ‌

Join Whatsapp