ಬಿಜೆಪಿಯ ಗೂಂಡಾಗಳಿಂದ ಬಾಲಕನಿಗೆ ಗಾಯ: ಎಎಪಿ ಆರೋಪ

Prasthutha|

- Advertisement -

ಸೂರತ್: ಎಎಪಿ ಚುನಾವಣಾ ಸಭೆಯ ವೇಳೆ ಜರುಗಿದ ಕಲ್ಲು ತೂರಾಟ ಘರ್ಷಣೆಗೆ ಬಿಜೆಪಿಯೇ ಕಾರಣ. ಇದರಿಂದಾಗಿ ಬಾಲಕನೋರ್ವ ಗಾಯಗೊಂಡಿದ್ದಾನೆ ಎಂದು ಎಎಪಿ ಗುಜರಾತ್ ಘಟಕದ ಮುಖ್ಯಸ್ಥ ಗೋಪಾಲ್ ಇಟಾಲಿಯಾ ಆರೋಪಿಸಿದ್ದಾರೆ.

ಈ ಬಗ್ಗೆ ಇಟಾಲಿಯಾ ಟ್ವಿಟ್ ಮಾಡಿದ್ದು, ಕತರಗಾಂ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಭಯದಿಂದಾಗಿ, ಬಿಜೆಪಿ ಗೂಂಡಾಗಳು ಇಂದು ನಾನು ಸಾರ್ವಜನಿಕ ಸಭೆ ನಡೆಸುತ್ತಿದ್ದ ವೇಳೆ ನನ್ನ ಮೇಲೆ ಕಲ್ಲು ತೂರಾಟ ನಡೆಸಿದರು. ಆದರೆ ಈ ಘಟನೆಯಲ್ಲಿ ಪುಟ್ಟ ಬಾಲಕ ಗಾಯಗೊಂಡಿದ್ದಾನೆ ಎಂದು ಹೇಳಿದ್ದಾರೆ.

Join Whatsapp