ಹೊಸದಿಲ್ಲಿ: 2014ರಲ್ಲಿ ಮೋದಿಯವರು ಪ್ರಧಾನಿ ಆದ ಮೇಲೆ ಭಾರತದ ಶೈಕ್ಷಣಿಕ ಸ್ವಾತಂತ್ರ್ಯವು ಕುಸಿತ ಕಂಡಿದ್ದು, ಕಲಿಕೆ ಪಟ್ಟಭದ್ರರ ಪಟ್ಟಿನೊಳಗೆ ಬಿದ್ದಿದೆ ಎಂದು 2023ರ ಅಕಾಡೆಮಿಕ್ ಫ್ರೀಡಮ್ ಇಂಡೆಕ್ಸ್ ಅಪ್ಡೇಟ್ ವರದಿ ಹೇಳಿದೆ.
ಸ್ವೀಡನ್ನಿನ ವಿ ಡೆಮ್ ಇನ್‌ಸ್ಟಿಟ್ಯೂಟ್ ಮತ್ತು ಜರ್ಮನಿಯ ಫ್ರೈಡ್‌ರಿಕ್ ಅಲೆಗ್ಸಾಂಡರ್ ವಿಶ್ವವಿದ್ಯಾನಿಲಯದ ಪೌರ ರಾಜಕೀಯ ವಿಜ್ಞಾನ ವಿಭಾಗದವರು 179 ದೇಶಗಳ ಕಲಿಕೆ ಅನುಭವಿಸಿದವರಿಂದ ಅಂಕಿ ಅಂಶ ಸಂಗ್ರಹಿಸಿ ಈ ವರದಿ ನೀಡಿವೆ.
ಭಾರತದ ಕಲಿಕಾ ಸ್ವಾತಂತ್ರ್ಯದ ಸೂಚ್ಯಂಕವು 0.4ಕ್ಕಿಂತಲೂ ಕೆಳಕ್ಕೆ ಇಳಿದಿದ್ದು, ಕಳೆದೊಂದು ದಶಕದಿಂದ ಸತತ ಇಳಿಮುಖದಲ್ಲಿರುವಾಗಿ ವರದಿಯಾಗಿದೆ.
ಅಮೆರಿಕ ಸಂಯುಕ್ತ ಸಂಸ್ಥಾನದ ಶೈಕ್ಷಣಿಕ ಸ್ವಾತಂತ್ರ್ಯ ಸೂಚ್ಯಂಕವು 0.8 ಇದೆ. ಮೆಕ್ಸಿಕೊ 0.2 ಮತ್ತು ಚೀನಾ 0.1 ಸೂಚ್ಯಂಕ ಕಂಡು ಬಂದಿವೆ.