ಮೇಘಾಲಯ: ರಾಜ್ಯಪಾಲರಿಗೆ 32 ಶಾಸಕರ ಬೆಂಬಲ ಪತ್ರ ಸಲ್ಲಿಸಿದ ಕಾನ್ರಾಡ್ ಸಂಗ್ಮಾ

Prasthutha|

ಮೇಘಾಲಯ: ನ್ಯಾಷನಲ್ ಪೀಪಲ್ಸ್ ಪಾರ್ಟಿ ಅಧ್ಯಕ್ಷ ಕಾನ್ರಾಡ್ ಕೆ ಸಂಗ್ಮಾ ಅವರು ಶುಕ್ರವಾರ ಈಶಾನ್ಯ ರಾಜ್ಯದಲ್ಲಿ ಸರ್ಕಾರ ರಚಿಸಲು ಹಕ್ಕು ಮಂಡಿಸುವ ಸಂದರ್ಭದಲ್ಲಿ ಬಿಜೆಪಿ (BJP), ಎನ್‌ಪಿಪಿ, ಎಚ್‌ಎಸ್‌ಪಿಡಿಪಿ ಮತ್ತು ಇಬ್ಬರು ಪಕ್ಷೇತರ ಶಾಸಕರು ಸಹಿ ಮಾಡಿರುವ ‘ಬೆಂಬಲ ಪತ್ರ’ವನ್ನು ಮೇಘಾಲಯದ ರಾಜ್ಯಪಾಲ ಫಾಗು ಚೌಹಾಣ್ ಅವರಿಗೆ ಸಲ್ಲಿಸಿದ್ದಾರೆ.

- Advertisement -

ಸಂಗ್ಮಾ ಅವರು ರಾಜ್ಯಪಾಲರೊಂದಿಗೆ ಇರುವ ಚಿತ್ರವನ್ನು ಅವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. 60 ಸದಸ್ಯ ಬಲದ ವಿಧಾನಸಭೆಯಲ್ಲಿ “ಹಲವು ಪಕ್ಷಗಳ 32 ಕ್ಕೂ ಹೆಚ್ಚು ಶಾಸಕರೊಂದಿಗೆ ಸಂಪೂರ್ಣ ಬಹುಮತವನ್ನು ಹೊಂದಿದ್ದೇನೆ” ಎಂದು ನಿರ್ಗಮಿತ ಸಿಎಂ ಹಿಂದಿನ ದಿನ ರಾಜ್ಯಪಾಲರಿಗೆ ತಿಳಿಸಿದ್ದರು. ಆದರೆ, ಹೊಸ ಮೈತ್ರಿಕೂಟದ ಹೆಸರನ್ನು ಇನ್ನೂ ನಿರ್ಧರಿಸಿಲ್ಲ ಎಂದು ಅವರು ಹೇಳಿದ್ದಾರೆ.

ಸಂಗ್ಮಾ ಅವರ ಎನ್‌ಪಿಪಿಗೆ ಬಿಜೆಪಿ ಬೆಂಬಲ ನೀಡಿದೆ. ಎನ್ ಪಿಪಿ ಒಟ್ಟು 59 ಸ್ಥಾನಗಳಲ್ಲಿ 26 ಸ್ಥಾನಗಳನ್ನು ಗಳಿಸುವ ಮೂಲಕ ರಾಜ್ಯದಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಬಹುಮತಕ್ಕೆ ಸ್ಥಾನಗಳು ಕಡಿಮೆ ಬಿದ್ದಿವೆ. ಕಳೆದ ಐದು ವರ್ಷಗಳಿಂದ ಎನ್‌ಪಿಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರೂ ಏಕಾಂಗಿಯಾಗಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಕೇವಲ ಎರಡು ಸ್ಥಾನಗಳನ್ನು ಪಡೆದುಕೊಂಡಿದೆ.

Join Whatsapp