ವಿಕಲಚೇತನ ವಕೀಲೆ ನ್ಯಾಯಾಧೀಶ ಹುದ್ದೆಗೆ ಪದೋನ್ನತಿ| ಕೊಲಿಜಿಯಂ ಶಿಫಾರಸು

Prasthutha|

ಹೊಸದಿಲ್ಲಿ: ವಿಕಲಚೇತನ ನ್ಯಾಯವಾದಿಯೊಬ್ಬರನ್ನು ಹೈಕೋರ್ಟ್‌ ಜಡ್ಜ್ ಆಗಿ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಪದೋನ್ನತಿ ನೀಡಿದೆ.

- Advertisement -

ವಕೀಲೆ ಮೋಕ್ಸಾ ಕಿರಣ್‌ ಥಕ್ಕರ್‌ ಅವರನ್ನು ಗುಜರಾತ್‌ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕ ಮಾಡುವಂತೆ ಕೊಲಿಜಿಯಂ ಶಿಫಾರಸು ಮಾಡಿದ್ದು, ಈ ನೇಮಕದಿಂದ ವಕೀಲೆ ಥಕ್ಕರ್‌ ಅವರಿಗೆ ತಮ್ಮ ದೈಹಿಕ ಅಸಮರ್ಥತೆಯಿಂದ ಹೊರಬರಲು ಸಾಧ್ಯವಾಗುವುದು ಎಂದು ಹೇಳಿದೆ.

ಅಲ್ಲದೆ, ಪರಿಶಿಷ್ಟ ಪಂಗಡದ ವಕೀಲ ಕರ್ಡಕ್‌ ಏಟೆ ಅವರನ್ನು ಗುವಾಹಟಿ ಹೈಕೋರ್ಟ್‌ಗೆ, ವಿಚಾರಣ ನ್ಯಾಯಾಲಯದ ವಕೀಲ ದೇವನ್‌ ಮಹೇಂದ್ರಭಾಯಿ ದೇಸಾಯಿ ರನ್ನು ಗುಜರಾತ್‌ ಹೈಕೋರ್ಟ್‌ ಜಡ್ಜ್ ಆಗಿ ನೇಮಿಸಲು ಕೊಲಿಜಿಯಂ ಶಿಫಾರಸು ಮಾಡಿದೆ.

Join Whatsapp