2022ರಲ್ಲಿ ಏಷ್ಯಾದ ಕರೆನ್ಸಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದ ಭಾರತೀಯ ರೂಪಾಯಿ

Prasthutha|

ನವದೆಹಲಿ: 2022ರಲ್ಲಿ ಭಾರತದ ರೂಪಾಯಿಯು ಏಷ್ಯಾದಲ್ಲಿಯೇ ಅತ್ಯಂತ ಕಳಪೆ ಸಾಧನೆ ತೋರಿದ ಕರೆನ್ಸಿಯಾಗಿದೆ.

- Advertisement -

ಈ ವರ್ಷದಲ್ಲಿ ರೂಪಾಯಿ  ಒಟ್ಟು ಶೇಕಡ 11.3ರಷ್ಟು ಕುಸಿತ ಕಂಡಿದ್ದು,  2013ರ ನಂತರದ ಅತ್ಯಂತ ದೊಡ್ಡ ಕುಸಿತ ಇದಾಗಿದೆ.

2021ರ ಕೊನೆಯಲ್ಲಿ ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು ₹ 74.33 ಆಗಿತ್ತು. 2022ರ ಕೊನೆಯಲ್ಲಿ ರೂಪಾಯಿ ಮೌಲ್ಯವು ಡಾಲರ್ ಎದುರು ₹ 82.72ಕ್ಕೆ (ಡಿ. 29ರ ಮೌಲ್ಯ) ತಲುಪಿದೆ.

- Advertisement -

ರಷ್ಯಾ-ಉಕ್ರೇನ್ ಸಂಘರ್ಷದಿಂದ ಉದ್ಭವಿಸಿದ ಕಚ್ಚಾ ತೈಲ ಬೆಲೆಗಳ ಏರಿಕೆಯೂ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಹೊಸ ವರ್ಷದ ಮೊದಲ ತ್ರೈಮಾಸಿಕದಲ್ಲಿ ರೂಪಾಯಿ ಮೌಲ್ಯವು ₹ 81.50ರಿಂದ ₹ 83.50ರ ನಡುವೆ ಇರಲಿದೆ ಎಂದು ವರ್ತಕರು ಹಾಗೂ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಫೆಡರಲ್ ರಿಸರ್ವ್ ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಸಮಯದವರೆಗೆ ದರಗಳನ್ನು ಹೆಚ್ಚಿಸಬಹುದು ಮತ್ತು ಅಭಿವೃದ್ಧಿಯು ನಿಧಾನಗತಿಯಲ್ಲಿ ಸಾಗಿ ಆರ್ಥಿಕ ಹಿಂಜರಿತವಾಗಿ ಬದಲಾದರೆ, ಭಾರತದ ರಫ್ತುಗಳ ಮೇಲೆ ತೀವ್ರ ಪರಿಣಾಮ ಬೀರಬಹುದು, ಇದು ರೂಪಾಯಿಗೆ ಎರಡು ಪ್ರಮುಖ ಅಪಾಯಗಳಾಗಿವೆ” ಎಂದು ಐಸಿಐಸಿಐ ಸೆಕ್ಯುರಿಟೀಸ್  ವ್ಯುತ್ಪನ್ನ ಸಂಶೋಧನಾ ಮುಖ್ಯಸ್ಥ ರಾಜ್ ದೀಪಕ್ ಸಿಂಗ್ ಹೇಳಿದ್ದಾರೆ.

Join Whatsapp