ಮಂಗಳೂರು| ಅಡಿಕೆ ಬೆಳೆ ಕುಸಿತ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

Prasthutha|

ಮಂಗಳೂರು:  ಬಿಜೆಪಿ ಸರಕಾರದ ಅಸಂಬದ್ಧ ನೀತಿಯಿಂದಾಗಿ ಅಡಿಕೆ ಬೆಲೆ ಡೋಲಾಯಮಾನವಾಗಿದ್ದು, ಕೂಡಲೆ ಅಡಿಕೆ ಆಮದು ನಿಲ್ಲಿಸಬೇಕು ಎಂದು ಮಾಜಿ ಶಾಸಕ ಜೆ. ಆರ್. ಲೋಬೋ ಅವರ ನೇತೃತ್ವದಲ್ಲಿ ನಗರದ ಕ್ಲಾಕ್ ಟವರ್  ಬಳಿ ಪ್ರತಿಭಟನೆ ನಡೆಯಿತು.

- Advertisement -

ಭಾರತ ಮಾತ್ರವಲ್ಲ ದಕ್ಷಿಣ ಕನ್ನಡ ಜಿಲ್ಲೆಯು ಕೃಷಿ ಪ್ರಧಾನವಾದುದು. ಅಡಿಕೆ ಬೆಳೆ ನಂಬಿ ಬದುಕು ಸಾಗಿಸುತ್ತಿರುವ ಲಕ್ಷಾಂತರ ಕುಟುಂಬಗಳಿವೆ. ನಮ್ಮ ಜಿಲ್ಲೆಯ ಅಡಿಕೆಗೆ ಜಗತ್ತಿನೆಲ್ಲೆಡೆ ಬೇಡಿಕೆ ಇದೆ. ಆದರೆ ಕೃಷಿ ವಿರೋಧಿ, ಬಿಜೆಪಿಯ ಅಸಂಬದ್ಧ ನೀತಿಯು ರೈತರಿಗೆ ಮಾರಕವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಡಿಕೆ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಪ್ರಕಾಶ್ ಸಾಲಿಯಾನ್, ಶಾಲೆಟ್ ಪಿಂಟೋ, ಶಶಿಧರ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.

Join Whatsapp