ಬೆಂಗಳೂರು ‘ಹೊನಲು’ ಟೆಸ್ಟ್: ಮೊದಲ ದಿನದಾಟದಲ್ಲಿ ಒಟ್ಟು 16 ವಿಕೆಟ್‌ಗಳು ಪತನ !

Prasthutha|

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೊಚ್ಚಲ ‘ಪಿಂಕ್ ಬಾಲ್’ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಪ್ರವಾಸಿ‌ ಶ್ರೀಲಂಕಾ 86 ರನ್’ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದು, ಮೊದಲ ಇನ್ನಿಂಗ್ಸ್‌’ನಲ್ಲಿ 166 ರನ್’ಗಳ ಹಿನ್ನಡೆಯಲ್ಲಿದೆ.
ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಟೀಮ್ ಇಂಡಿಯಾ, ಶ್ರೇಯಸ್ ಅಯ್ಯರ್ ಅರ್ಧಶತಕದ (92) ಹೊರತಾಗಿಯೂ, ಮೊದಲ ಇನ್ನಿಂಗ್ಸ್‌ನಲ್ಲಿ 252 ರನ್‌ಗಳಿಗೆ ಆಲೌಟ್ ಆಗಿತ್ತು.

- Advertisement -

ಈ ಮೂಲಕ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಒಟ್ಟು 338 ರನ್’ಗಳಿಗೆ 16 ವಿಕೆಟ್‌ಗಳು ಪತನಗೊಂಡಿವೆ.

ಜಸ್‌’ಪ್ರೀತ್ ಬೂಮ್ರಾ ಮೂರು, ಮುಹಮ್ಮದ್ ಶಮಿ ಎರಡು ಮತ್ತು ಅಕ್ಷರ್ ಪಟೇಲ್ ಒಂದು ವಿಕೆಟ್ ಕಬಳಿಸಿ ಲಂಕಾ ಓಟಕ್ಕೆ ಕಡಿವಾಣ ಹಾಕಿದರು.

- Advertisement -

ಏಂಜೆಲೊ ಮ್ಯಾಥ್ಯೂಸ್ (43) ಅಲ್ಪ ಪ್ರತಿರೋಧ ಒಡ್ಡಿದರು. ಕುಸಾಲ್ ಮೆಂಡಿಸ್ (2), ನಾಯಕ ದಿಮುತ್ ಕರುಣರತ್ನೆ (4), ಲಹಿರು ತಿರಿಮಣ್ಣೆ (8), ಧನಂಜಯ ಡಿ ಸಿಲ್ವ (10), ಚರಿತ ಅಸಲಂಕ (5) ವೈಫಲ್ಯ ಅನುಭವಿಸಿದರು. 13 ರನ’ಗಳಿಸಿರುವ ವಿಕೆಟ್ ಕೀಪರ್ ನಿರೋಷನ್ ಡಿಕ್ವೆಲ್ಲಾ ಹಾಗೂ ಲಸಿತ್ ಎಂಬುಲದೆನಿಯಾ (0) ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

Join Whatsapp