ಕೊಹ್ಲಿ-ಸೂರ್ಯಕುಮಾರ್‌ ಶತಕದ ಜೊತೆಯಾಟ| ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಗೆದ್ದ ಭಾರತ

ಹೈದರಾಬಾದ್:‌ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ 3ನೇ ಪಂದ್ಯವನ್ನು ರೋಚಕವಾಗಿ ಗೆದ್ದ ರೋಹಿತ್‌ ಬಳಗ, 2013ರ ಬಳಿಕ ಇದೇ ಮೊದಲ ಬಾರಿಗೆ ತಾಯ್ನೆಲದಲ್ಲಿ ವಿಶ್ವ ಚಾಂಪಿಯನ್ನರ ವಿರುದ್ಧ ಸರಣಿ ಗೆಲುವಿನ ಸಂಭ್ರಮವನ್ನಾಚರಿಸಿದೆ.

ಹೈದರಾಬಾದ್‌ನ ವಿದರ್ಭ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದ ʻಫೈನಲ್‌ ಪಂದ್ಯʼದಲ್ಲಿ ಆಸ್ಟ್ರೇಲಿಯಾ ನೀಡಿದ್ದ 187 ರನ್‌ಗಳ ಗುರಿಯನ್ನು ಭಾರತ 19.5 ಓವರ್‌ಗಳಲ್ಲಿ ಚೇಸ್‌ ಮಾಡಿತು. ವಿರಾಟ್‌ ಕೊಹ್ಲಿ 63 ರನ್‌ಗಳಿಸಿದರೆ ಸೂರ್ಯಕುಮಾರ್‌ 69 ರನ್‌ಗಳಿಸಿ ಭಾರತಕ್ಕೆ ಸ್ಮರಣೀಯ ಜಯ ತಂದಿತ್ತರು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಗೆಲುವಿನ ರನ್ ಬಾರಿಸುವ ಮೂಲಕ ಭಾರತ ಟಿ20 ಸರಣಿ ಗೆದ್ದಿದೆ. 

- Advertisement -

ನಿರ್ಣಾಯಕ ಪಂದ್ಯದ ಚೇಸಿಂಗ್‌ ವೇಳೆ ಆರಂಭದಲ್ಲೇ ಕೆ.ಎಲ್‌. ರಾಹುಲ್‌ (1 ರನ್‌) ವಿಕೆಟ್‌ ಪತನವಾಗಿತ್ತು. ನಾಯಕ ರೋಹಿತ್‌ ಶರ್ಮಾ (17 ರನ್‌) ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಆ ಬಳಿಕ ಒಂದಾದ ವಿರಾಟ್‌ ಕೊಹ್ಲಿ ಮತ್ತು ಸೂರ್ಯಕುಮಾರ್‌ ಯಾದವ್‌ ಶತಕದ ಜೊತೆಯಾಟ ಆಡುವ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಭರ್ಜರಿಯಾಗಿ ಬ್ಯಾಟ್‌ ಬೀಸುತ್ತಿದ್ದ ಸೂರ್ಯಕುಮಾರ್‌ ಯಾದವ್‌ (69 ರನ್‌, 35 ಎಸೆತ, 4×5, 5×5) ವಿಕೆಟ್‌ ಪಡೆಯುವಲ್ಲಿ ಜಾಶ್‌ ಹ್ಯಾಝಲ್‌ವುಡ್‌ ಯಶಸ್ವಿಯಾದರು.