ಟಿ20 ಸರಣಿ| ಭಾರತದ ಗೆಲುವಿಗೆ 187 ರನ್‌ ಗುರಿ ನೀಡಿದ ಆಸ್ಟ್ರೇಲಿಯಾ

Prasthutha|

ಹೈದರಾಬಾದ್:‌

- Advertisement -

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಗೆಲುವಿಗೆ ಟೀಮ್‌ ಇಂಡಿಯಾ 187 ರನ್‌ ಗುರಿ ಪಡೆದಿದೆ. ಹೈದರಾಬಾದ್‌ನ ವಿದರ್ಭ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ʻಫೈನಲ್‌ ಪಂದ್ಯʼದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಆರನ್ ಫಿಂಚ್ ಪಡೆ ನಿಗಧಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟದಲ್ಲಿ 186 ರನ್‌ಗಳಿಸಿದೆ.

19 ಎಸೆತಗಳಲ್ಲಿ ಗ್ರೀನ್‌ ಅರ್ಧಶತಕ !

- Advertisement -

ಆರಂಭಿಕನಾಗಿ ಕಣಕ್ಕಿಳಿದ ಕ್ಯಾಮರೂನ್‌ ಗ್ರೀನ್‌, ಕೇವಲ 19 ಎಸೆತಗಳಲ್ಲೇ ಅರ್ಧಶತಕ ಸಿಡಿಸಿ ಅಬ್ಬರಿಸಿದರು. 3 ಸಿಕ್ಸರ್‌ ಮತ್ತು 7 ಬೌಂಡರಿಗಳ ನೆರವಿನಿಂದ 21 ಎಸೆಗಳಲ್ಲಿ 52 ರನ್‌ಗಳಿಸಿ ಭುವನೇಶ್ವರ್‌ ಕುಮಾರ್‌ ಬೌಲಿಂಗ್‌ನಲ್ಲಿ ಕ್ಯಾಚಿತ್ತು ನಿರ್ಗಮಿಸಿದರು.

ಆದರೆ ಅದಾಗಲೇ ಆಸ್ಟ್ರೇಲಿಯಾ 6 ಓವರ್‌ಗಳಲ್ಲಿ 62 ರನ್‌ಗಳಿಸಿತ್ತು.ಆ  ಬಳಿಕ ಪಂದ್ಯದಲ್ಲಿ ಭಾರತೀಯ ಬೌಲರ್‌ಗಳ ಕೈ ಮೇಲಾಗಿತ್ತು. 15 ಓವರ್‌ ಕಳೆಯುವಷ್ಟರಲ್ಲಿ 6 ವಿಕೆಟ್‌ ಕಳೆದುಕೊಂಡಿದ್ದ ಆಸೀಸ್‌ 123 ರನ್‌ಗಳಿಸಿತ್ತು.

ಟಿಮ್‌ ಡೇವಿಡ್‌ ಅಬ್ಬರ !

ನಿಧಾನಗತಿಯಲ್ಲಿ ಸಾಗುತ್ತಿದ್ದ ಆಸೀಸ್‌ ಬ್ಯಾಟಿಂಗ್‌ಗೆ 6ನೇ ಕ್ರಮಾಂಕದಲ್ಲಿ ಬಂದ ಟಿಮ್‌ ಡೇವಿಡ್‌ ಬಲ ತುಂಬಿದರು. 25 ಎಸೆತಗಳಲ್ಲಿ ಅರ್ಧ ಶತಕ ಪೂರ್ತಿಗೊಳಿಸಿದ ಡೇವಿಡ್‌, 4 ಸಿಕ್ಸರ್‌ ಮತ್ತು 2 ಬೌಂಡರಿಗಳ ನೆರವಿನಿಂದ 54 ರನ್‌ಗಳಿಸಿ ಔಟಾದರು.

18ನೇ ಓವರ್‌ನಲ್ಲಿ 21 ರನ್‌ ಬಿಟ್ಟುಕೊಟ್ಟ ಭುವಿ !

ಸತತ ಮೂರು ಪಂದ್ಯಗಳಲ್ಲಿ 19 ಓವರ್‌ ಎಸೆದು ತಂಡವನ್ನು ಸೋಲಿನ ದವಡೆಗೆ ತಳ್ಳಿ ವ್ಯಾಪಕ ಟೀಕೆಗೆ ಒಳಗಾಗಿದ್ದ ಭುವನೇಶ್ವರ್‌ ಕುಮಾರ್‌, ಮಹತ್ವದ ಪಂದ್ಯದಲ್ಲಿ ಮತ್ತೊಮ್ಮೆ ದುಬಾರಿ ಓವರ್‌ ಎಸೆದರು. ಆದರೆ ಈ ಬಾರಿ 19ರ ಬದಲು 18ನೇ ಓವರ್‌ ಎಸೆದ ಭುವಿ 21 ರನ್‌ ಬಿಟ್ಟುಕೊಟ್ಟರು. ಮೂರು ಓವರ್‌ ಎಸೆದ ಭುವನೇಶ್ವರ್‌ ಕುಮಾರ್‌ 39 ರನ್‌ ಬಿಟ್ಟುಕೊಟ್ಟು 1 ವಿಕೆಟ್‌ ಪಡೆದರು.

ಭಾರತ ಪಾಲಿಗೆ ಮತ್ತೊಮ್ಮೆ ಆಪತ್ಭಾಂಧವನಾದ ಸ್ಪಿನ್ನರ್‌ ಅಕ್ಷರ್‌ ಪಟೇಲ್‌,  4 ಓವರ್‌ಗಳ ದಾಳಿಯಲ್ಲಿ 33 ರನ್‌ ನೀಡಿ 3 ಪ್ರಮುಖ ವಿಕೆಟ್‌ ಪಡೆದರು. 

ಹೈದರಾಬಾದ್:‌ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಗೆಲುವಿಗೆ ಟೀಮ್‌ ಇಂಡಿಯಾ 187 ರನ್‌ ಗುರಿ ಪಡೆದಿದೆ. ಹೈದರಾಬಾದ್‌ನ ವಿದರ್ಭ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ʻಫೈನಲ್‌ ಪಂದ್ಯʼದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಆರನ್ ಫಿಂಚ್ ಪಡೆ ನಿಗಧಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟದಲ್ಲಿ 186 ರನ್‌ಗಳಿಸಿದೆ.

19 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಗ್ರೀನ್‌ !

Join Whatsapp