ಜಾಗತಿಕ ಹಸಿವು ಸೂಚ್ಯಂಕದಲ್ಲಿ 111ನೇ ಸ್ಥಾನಕ್ಕೆ ಕುಸಿದ ಭಾರತ

Prasthutha|

ನವದೆಹಲಿ: 125 ದೇಶಗಳಿಗೆ ಸಂಬಂಧಿಸಿದ ಪ‍್ರಸಕ್ತ ಸಾಲಿನ ಜಾಗತಿಕ ಹಸಿವು ಸೂಚ್ಯಂಕ ವಿವರಗಳನ್ನು ಗುರುವಾರ ಬಿಡುಗಡೆ ಮಾಡಲಾಗಿದ್ದು, ಭಾರತೀಯರಿಗೆ ತೀವ್ರ ನಿರಾಸೆಯಾಗಿದೆ. ಭಾರತವು ಗಮನಾರ್ಹ 111ನೇ ಸ್ಥಾನಕ್ಕೆ ಕುಸಿದಿದೆ.

- Advertisement -

ಜಾಗತಿಕ ಹಸಿವು ಸೂಚ್ಯಂಕ-2023ಕ್ಕೆ ಸಂಬಂಧಿಸಿ ಭಾರತದ ಅಂಕ ಶೇ 28.7ರಷ್ಟಿದೆ. ಇದು ಹಸಿವಿನ ಮಟ್ಟ ಗಂಭೀರವಾಗಿರುವುದನ್ನು ತೋರಿಸುತ್ತದೆ ಎಂದು ಕೂಡ ಬಿಡುಗಡೆ ಮಾಡಿರುವ ವರದಿಯಲ್ಲಿ ವಿವರಿಸಲಾಗಿದೆ.

ಜಾಗತಿಕ ಹಸಿವು ಸೂಚ್ಯಂಕ'(ಜಿಎಚ್‌ಐ) ಎಂಬುದು ಪ್ರಾದೇಶಿಕ, ರಾಷ್ಟ್ರೀಯ ಹಾಗೂ ಜಾಗತಿಕ ಮಟ್ಟದಲ್ಲಿ ಹಸಿವಿನ ಪ್ರಮಾಣವನ್ನು ಅಳೆಯುವ ಸಾಧನವಾಗಿದೆ. ಕಳೆದ ವರ್ಷ 121 ರಾಷ್ಟ್ರಗಳ ಪೈಕಿ ಭಾರತವು 107ನೇ ಸ್ಥಾನದಲ್ಲಿತ್ತು.

- Advertisement -

ಭಾರತದ ನೆರೆಯ ರಾಷ್ಟ್ರಗಳದ್ದು ಭಾರತಕ್ಕಿಂದ ಉತ್ತಮ ಸ್ಥಿತಿಯಾಗಿದೆ. ಪಾಕಿಸ್ತಾನ 102ನೇ ಸ್ಥಾನಲ್ಲಿದ್ದರೆ, ಬಾಂಗ್ಲಾದೇಶ -81, ನೇಪಾಳ- 69 ಹಾಗೂ ಶ್ರೀಲಂಕಾ 60ನೇ ಸ್ಥಾನದಲ್ಲಿದೆ. ಎಂದು ವರದಿಯಲ್ಲಿ ವಿವರಿಸಲಾಗಿದೆ.

ಮಕ್ಕಳು ತಮ್ಮ ಎತ್ತರಕ್ಕೆ ತಕ್ಕಷ್ಟು ತೂಕ ಹೊಂದಿಲ್ಲದಿರುವುದು ಕೂಡ ಅಪೌಷ್ಟಿಕತೆ ವ್ಯಾಪ್ತಿಗೆ ಬರುತ್ತದೆ. ಈ ಪ್ರಮಾಣವು ಭಾರತದಲ್ಲಿ ಶೇ 18.7ರಷ್ಟಿದೆ. ಇದು ಜಗತ್ತಿನಲ್ಲಿಯೇ ಗರಿಷ್ಠ ಮಟ್ಟದ್ದಾಗಿದೆ ಎಂದು ಸೂಚ್ಯಂಕ ಕುರಿತ ವರದಿಯಲ್ಲಿ ಹೇಳಲಾಗಿದೆ.