ಬೆಂಗ್ಳೂರಲ್ಲಿ ಐಟಿ ಅಧಿಕಾರಿಗಳ ರಾತ್ರಿ ದಾಳಿ: ಬಾಕ್ಸ್‌ಗಳಲ್ಲಿ ಕಂತೆ ಕಂತೆ ಹಣ ಪತ್ತೆ

Prasthutha|

ಬೆಂಗಳೂರು: ಬೆಂಗಳೂರಿನಲ್ಲಿ ಐಟಿ ಅಧಿಕಾರಿಗಳ ರಾತ್ರಿ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಫ್ಲ್ಯಾಟ್‌ವೊಂದರಲ್ಲಿ ಅಪಾರ ಪ್ರಮಾಣದ ಹಣ ಪತ್ತೆಯಾಗಿದೆ. ಬರೋಬ್ಬರಿ 25 ಬಾಕ್ಸ್ ಗಳಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದೆ. ಐನೂರು ಮುಖಬೆಲೆಯ ಕಂತೆ ಕಂತೆ ಹಣ ಕಂಡು ಅಧಿಕಾರಿಗಳು ದಂಗಾಗಿದ್ದಾರೆ.

- Advertisement -

ಭ್ರಷ್ಟರು ಕಾರಿನಲ್ಲಿ ಹಣ ಸಾಗಾಟ ಮಾಡಲು ತಯಾರಿ ನಡೆಸಿದ್ದರು. ವಿಷಯ ಅರಿತ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಿನ್ನೆ(ಗುರುವಾರ) ಸಂಜೆ 6 ಗಂಟೆಗೆ ಪೊಲೀಸ್ ಸಿಬ್ಬಂದಿ ಭದ್ರತೆಯಲ್ಲಿ ಐಟಿ ಅಧಿಕಾರಿಗಳು ದಾಳಿ ಆರಂಭಿಸಿದ್ದರು.

ಏಕಕಾಲದಲ್ಲಿ ಆರ್ ಟಿ ನಗರದ ಎರಡು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಆತ್ಮಾನಂದ ಕಾಲೋನಿಯ ಫ್ಲ್ಯಾಟ್‌ವೊಂದರ ಮೇಲೆ ದಾಳಿ ನಡೆಸಲಾಗಿದೆ. ಫ್ಯಾಟ್‌ನಲ್ಲಿ ದಾಳಿ ವೇಳೆ ಕೋಟಿ ಕೋಟಿ ಹಣ ಪತ್ತೆಯಾಗಿದೆ. ಅದರ ಮೌಲ್ಯ ಎಷ್ಟಂದು ಇನ್ನೂ ಬಹಿರಂಗವಾಗಿಲ್ಲ.

Join Whatsapp