ಇಸ್ರೇಲ್ ನಿಂದ ಭಾರತಕ್ಕೆ ಆಗಮಿಸಿದ 220 ಭಾರತೀಯರು

Prasthutha|

ನವದೆಹಲಿ: ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧ ಮುಂದುವರೆದಿದ್ದು, ಇಸ್ರೇಲ್ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ಭಾರತ ಸರ್ಕಾರ ‘ಆಪರೇಷನ್ ಅಜಯ್’ ಪ್ರಾರಂಭಿಸಿದೆ. ಇಸ್ರೇಲ್ನ ಟೆಲ್ ಅವೀವ್ ವಿಮಾನ ನಿಲ್ದಾಣದಿಂದ 220 ಭಾರತೀಯರನ್ನು ಹೊತ್ತ ಮೊದಲ ಚಾರ್ಟರ್ ವಿಮಾನ ಶುಕ್ರವಾರ ಬೆಳಿಗ್ಗೆ ಭಾರತಕ್ಕೆ ಬಂದಿಳಿದಿದೆ.

- Advertisement -

ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಗುರುವಾರ ‘ಆಪರೇಷನ್ ಅಜಯ್’ ಸಿದ್ಧತೆಗಳನ್ನು ಪರಿಶೀಲಿಸಿದರು. ಸುಮಾರು 18,000 ಭಾರತೀಯರು ಇಸ್ರೇಲ್ನಲ್ಲಿದ್ದಾರೆ ಎಂದು ಎಂಇಎ ವಕ್ತಾರರು ತಿಳಿಸಿದ್ದಾರೆ. ಅವರು ಭಾರತೀಯ ರಾಯಭಾರ ಕಚೇರಿಯಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳಲು ಮತ್ತು ಸಲಹೆಗೆ ಗಮನ ಹರಿಸಲು ವಿನಂತಿಸಲಾಗಿದೆ.

ಫೆಲೆಸ್ತೀನ್ ಪ್ರದೇಶಗಳಾದ ಪಶ್ಚಿಮ ದಂಡೆ ಮತ್ತು ಗಾಜಾದಲ್ಲಿ ಭಾರತೀಯ ಪ್ರಜೆಗಳ ಉಪಸ್ಥಿತಿಯ ಬಗ್ಗೆ ಮಾತನಾಡಿದ ಎಂಇಎ ವಕ್ತಾರರು, “ನನಗೆ ತಿಳಿದಿರುವಂತೆ, ಕೆಲವು ಜನರು ಪಶ್ಚಿಮ ದಂಡೆಯಲ್ಲಿದ್ದಾರೆ ಮತ್ತು 3-4 ಜನರು ಗಾಜಾದಲ್ಲಿದ್ದಾರೆ” ಎಂದು ಹೇಳಿದರು. ಇದೀಗ ಜನರನ್ನು ಸ್ಥಳಾಂತರಿಸುವಂತೆ ಇಸ್ರೇಲ್ ನಿಂದ ನಮಗೆ ಮನವಿ ಇದೆ. ಇಲ್ಲಿಯವರೆಗೆ, ಅಲ್ಲಿಂದ ಯಾವುದೇ ಭಾರತೀಯರ ಸಾವು ವರದಿಯಾಗಿಲ್ಲ. ಗಾಯಗೊಂಡಿರುವ ಕೆಲವರು ಆಸ್ಪತ್ರೆಯಲ್ಲಿದ್ದಾರೆ.