ಜಿಂಬಾಬ್ವೆ ವಿರುದ್ಧ ಭಾರತಕ್ಕೆ 5 ವಿಕೆಟ್‌ಗಳ  ಭರ್ಜರಿ ಗೆಲುವು, ಸರಣಿ ಕೈವಶ

Prasthutha|

ಹರಾರೆ: ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲೂ ಟೀಮ್‌ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದೆ. ಹರಾರೆ ಸ್ಪೋರ್ಟ್ಸ್‌ ಕ್ಲಬ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 5 ವಿಕೆಟ್‌ಗಳ ಸ್ಮರಣೀಯ ಗೆಲುವಿನೊಂದಿಗೆ ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ ಭಾರತ, ಸರಣಿಯನ್ನೂ ತನ್ನದಾಗಿಸಿಕೊಂಡಿದೆ. ಪ್ರಸಕ್ತ ವರ್ಷ ಟೀಮ್‌ ಇಂಡಿಯಾ ಗೆಲ್ಲುತ್ತಿರುವ 10ನೇ ಸರಣಿ ಇದಾಗಿದೆ. ಈ ಗೆಲುವಿನೊಂದಿಗೆ ಜಿಂಬಾಬ್ವೆ ವಿರುದ್ಧ ಸತತ 14 ಏಕದಿನ ಪಂದ್ಯಗಳಲ್ಲಿ ಭಾರತ ಗೆಲುವು ದಾಖಲಿಸಿದಂತಾಗಿದೆ.

- Advertisement -

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಆತಿಥೇಯ ಜಿಂಬಾಬ್ವೆ 38.1 ಓವರ್‌ಗಳಲ್ಲಿ 161 ರನ್‌ಗಳಿಸುವಷ್ಟರಲ್ಲಿಯೇ ಸರ್ವಪತನ ಕಂಡಿತ್ತು. ಸುಲಭ ಗುರಿಯನ್ನು ಬೆನ್ನಟ್ಟಿದ ಭಾರತ 25. 4 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟದಲ್ಲಿ ಗೆಲುವಿನ ಗುರಿ ತಲುಪಿತು. ಮೊದಲ ಪಂದ್ಯದಲ್ಲಿ ಜಿಂಬಾಬ್ವೆ ನೀಡಿದ್ದ 190 ರನ್‌ಗಳ ಗುರಿಯನ್ನು ಭಾರತ ಯಾವುದೇ ವಿಕೆಟ್‌ ಕಳೆದುಕೊಳ್ಳದೆ ಚೇಸ್‌ ಮಾಡಿತ್ತು.

ಆರಂಭಿಕರ ಬದಲಾವಣೆ ಮಾಡಿದ್ದ ಟೀಮ್‌ ಇಂಡಿಯಾ ಯಶಸ್ಸು ಕಾಣಲಿಲ್ಲ. ಶುಭ್‌ಮನ್‌ ಗಿಲ್‌ ಬದಲು ಶಿಖರ್‌ ಧವನ್‌ ಜೊತೆ ಇನಿಂಗ್ಸ್‌ ಆರಂಭಿಸಿದ್ದ ನಾಯಕ ಕೆ.ಎಲ್‌.ರಾಹುಲ್‌ ಕೇವಲ 1 ರನ್‌ಗಳಿಸಿದ್ದ ವೇಳೆ  ಎಲ್‌ಬಿಡ್ಬ್ಲ್ಯೂ ಆಗಿ ನಿರ್ಗಮಿಸಿದರು. ಧವನ್‌ ಮತ್ತು ಗಿಲ್‌ ತಲಾ 33 ರನ್‌ಗಳಿಸಿ ನಿರ್ಗಮಿಸಿದರು. ದೀಪಕ್‌ ಹೂಡ 25 ರನ್‌ ಮತ್ತು ವಿಕೆಟ್‌ ಕೀಪರ್‌ ಸಂಜು ಸ್ಯಾಮ್ಸನ್‌ 43 ರನ್‌ಗಳಿಸಿ ಅಜೇಯರಾಗುಳಿದರು.

- Advertisement -

ಜಿಂಬಾಬ್ವೆ ಪರ ಲೂಕ್‌ ಜೋಂಗ್ವೆ 2 ವಿಕೆಟ್‌ ಪಡೆದರೆ ತನಕಾ ಚಿವಂಗ, ವಿಕ್ಟರ್ ನ್ಯುಚಿ ಹಾಗೂ ಸಿಕಂದರ್ ರಝಾ ತಲಾ ಒಂದು ವಿಕೆಟ್‌ ಪಡೆದರು.

ಇದಕ್ಕೂ ಮೊದಲು ಬ್ಯಾಟ್‌ ಮಾಡಿದ್ದ ಜಿಂಬಾಬ್ವೆ 38.1 ಓವರ್‌ಗಳಲ್ಲಿ 161 ರನ್‌ಗಳಿಸುವಷ್ಟರಲ್ಲಿಯೇ ಇನ್ನಿಂಗ್ಸ್‌ ಮುಗಿಸಿತ್ತು ಕಂಡಿತ್ತು. ಶಾರ್ದೂಲ್‌ ಠಾಕೂರ್‌ 3 ವಿಕೆಟ್‌ ಪಡೆದು ಮಿಂಚಿದರೆ, ಮುಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್ ಹಾಗೂ ದೀಪಕ್ ಹೂಡಾ ತಲಾ ಒಂದು ವಿಕೆಟ್‌ ಪಡೆದರು. ಸರಣಿಯ ಅಂತಿಮ ಮತ್ತು ಔಪಚಾರಿಕ ಪಂದ್ಯ ಆಗಸ್ಟ್‌ 22ರಂದು ಇದೇ ಮೈದಾನದಲ್ಲಿ ನಡೆಯಲಿದೆ.

Join Whatsapp