ಶಕ್ತಿ ಯೋಜನೆ ಬಳಿಕ ಹೆಚ್ಚಾದ ಪ್ರಯಾಣಿಕರ ಸಂಖ್ಯೆ: ನಾಲ್ಕು ‌ಸಾರಿಗೆ ನಿಗಮಕ್ಕೆ ಬರಲಿದೆ ನಾಲ್ಕು ಸಾವಿರ ಹೊಸ ಬಸ್

Prasthutha|

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮಹಿಳೆಯರಿಗೆ ಉಚಿತ ಬಸ್ ಸೇವೆ ಒದಗಿಸುವ ಶಕ್ತಿ ಯೋಜನೆ ಘೋಷಣೆ ಮಾಡಿತು.

- Advertisement -

ಇಂದಿಗೆ ಒರೋಬ್ಬರಿ 15 ದಿನ ಕಳೆದಿದ್ದು ಕೋಟ್ಯಾಂತರ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಇನ್ನು ಮತ್ತೊಂದೆಡೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸರ್ಕಾರಿ ಬಸ್​ಗಳನ್ನು ಬಳಸುತ್ತಿದ್ದು ರಾಜ್ಯದಲ್ಲಿರುವ ‌ಸಾರಿಗೆ ನಿಗಮದ ಬಸ್ಸುಗಳು ಸಾಲುತ್ತಿಲ್ಲ. ಹೀಗಾಗಿ ನಾಲ್ಕೂ ಸಾರಿಗೆ ನಿಗಮಕ್ಕೆ ನಾಲ್ಕು ಸಾವಿರ ಹೊಸ ಬಸ್​ ಖರೀದಿಗೆ ಚಿಂತನೆ ನಡೆದಿದೆ.

ನಾಲ್ಕು ‌ಸಾರಿಗೆ ನಿಗಮಕ್ಕೆ ಬರಲಿದೆ ನಾಲ್ಕು ಸಾವಿರ ಹೊಸ ಬಸ್

- Advertisement -

ಕೆಎಸ್​ಆರ್​ಟಿಸಿಯಲ್ಲಿ ಈಗಾಗಲೇ 8116 ಬಸ್ಸುಗಳಿವೆ. ಬಿಎಂಟಿಸಿಯಲ್ಲಿ 6688, ವಾಯುವ್ಯ ಸಾರಿಗೆಯಲ್ಲಿ 4858 ಬಸ್ಸುಗಳು ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ 4327 ಬಸ್​ಗಳಿವೆ. ಅಂದ್ರೆ ಒಟ್ಟು ನಾಲ್ಕು ಸಾರಿಗೆ ನಿಗಮದಿಂದ 23,986 ಬಸ್ಸುಗಳಿವೆ. ಆದರೆ ರಾಜ್ಯದ ಪ್ರಯಾಣಿಕರ ಸಂಖ್ಯೆಗೆ ಹೋಲಿಸಿದರೆ ಇಷ್ಟು ಬಸ್ಸುಗಳು ಸಾಲುವುದಿಲ್ಲ.

ಅಲ್ಲದೆ ಈಗಾಗಲೇ ಹತ್ತು ಲಕ್ಷಕ್ಕಿಂತ ಹೆಚ್ಚು ಕಿಮೀ ಸಂಚಾರ ಮಾಡಿರುವ ಬಸ್ಸುಗಳಿವೆ. ಆರ್​ಟಿಓ ರೂಲ್ಸ್ ಪ್ರಕಾರ ಬಸ್ಸುಗಳು 8 ರಿಂದ 10 ಲಕ್ಷ ಕಿಮೀ ಮಾತ್ರ ಸಂಚಾರ ಮಾಡಬೇಕು. ‌ಅದರ ಮೇಲೆ ಮಾಡಿದ್ರೆ ಅದನ್ನು ಗುಜರಿಗೆ ಹಾಕಬೇಕು. ಆದರೆ ನಾಲ್ಕು ನಿಗಮಗಳಲ್ಲಿ ಸುಮಾರು 3 ರಿಂದ 4 ಸಾವಿರ ಹಳೆಯ ಬಸ್ಸುಗಳಿದ್ದು ಅವುಗಳನ್ನು ಗುಜರಿಗೆ ಹಾಕಿ ಮತ್ತೆ ಹೊಸದಾಗಿ ನಾಲ್ಕು ಸಾವಿರ ಬಸ್ಸುಗಳನ್ನು ಸೇರಿಸಲು ತಯಾರಿ ನಡೆದಿದೆ.

ಇನ್ನು ಈ ವರ್ಷದಲ್ಲಿ ನಾಲ್ಕು ಸಾರಿಗೆ ನಿಗಮಗಳ ಪೈಕಿ 95% ನಾರ್ಮಲ್ ಹೊಸ ಬಸ್​ಗಳು ಬರಲಿದ್ದು ಮಿಕ್ಕ 5 % ಮಲ್ಟಿ ಆಕ್ಸೆಲ್ ಹಾಗೂ ಡಬಲ್ ಡೆಕ್ಕರ್ ಬಸ್​ಗಳು ಬರಲಿವೆ. ಇದರಲ್ಲಿ ಬಹುಪಾಲು ಬಿಎಂಟಿಸಿ, ಕೆಎಸ್ಆರ್ಟಿಸಿ ನಿಗಮಕ್ಕೆ ಸೇರಲಿವೆ.

Join Whatsapp